ರಾಯಚೂರು

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ, ರೋಗಿಗಳ ಪರದಾಟ .

ಮುದಗಲ್ :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಪಟ್ಟಣ ಸಮೀಪದ ಮಾಕಾಪೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಕೊರತೆ ಯಿಂದ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಮಾಕಾಪೂರು ಗ್ರಾಮದ ಪ್ರಾಥಮಿಕ ಆರೋಗ್ಯದ ದೇಸಾಯಿಬೋಗಾಪೂರು ಉಪಕೇಂದ್ರ ವ್ಯಾಪ್ತಿಯಲ್ಲಿ ಆರು ಗ್ರಾಮಗಳು ಹನ್ನೆರಡು ತಾಂಡಾ ಗಳು ನಾಗಲಾಪೂರು ಆರೋಗ್ಯ ಉಪಕೇಂದ್ರ ವ್ಯಪ್ತಿಯಲ್ಲಿ ಐದು ಗ್ರಾಮಗಳು ಎರಡು ತಾಂಡಾ ಗಳು ಬನ್ನಿಗೋಳ ಉಪಕೇಂದ್ರ ವ್ಯಾಪ್ತಿಯಲ್ಲಿ ಆರು ಗ್ರಾಮಗಳು ಮಾಕಾಪೂರು ವ್ಯಾಪ್ತಿಯಲ್ಲಿ ಎಂಟು ಗ್ರಾಮಗಳು ಮತ್ತು 49 ಅಂಗನವಾಡಿ ಕೇಂದ್ರಗಳು ಒಳಪಡುತ್ತವೆ .ಇಲ್ಲಿ ಕಾರ್ಯನಿರ್ವಹಿಸುವ ಎಂ.ಬಿ.ಬಿ.ಎಸ್ ವೈದ್ಯರನ್ನು ಮುದಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ ಒರ್ವ ಆಯುಷ್ಯು ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಬೇಕು ಸರಕಾರಿ ಶಾಲೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಬೇಕು ಇದರಿಂದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ.ಇದರ ಸಿಬ್ಬಂದಿಗಳು ಕೂಡ ಸರಿಯಾದ ಸಮಯದಲ್ಲಿ ಇರುವುದಿಲ್ಲ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗಳು ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಆರೋಗ್ಯ ಕೇಂದ್ರದ ಆವರಣದ ಹಿಂದೆ ಮುಂದೆ ಜಾಲಿ ಗಿಡಗಳು ಸೇರಿದಂತೆ ವಿವಿಧ ಗಿಡಗಳು ಬೆಳೆದು ವಿಷಜಂತುಗಳ ತಾಣವಾಗಿದೆ. ಸ್ವಚ್ಛೆತೆ ಕಾಪಾಡುವಲ್ಲಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ವಹಿಸಿದ್ದಾರೆ ರೋಗಿಗಳಿಗೆ ಕುಡಿಯುವ ನೀರು ಸೇರಿದಂತೆ ಯಾವುದೆ ಸೌಕರ್ಯ ವಿರುದಿಲ್ಲ ಸಮಸ್ಯೆ ಕುರಿತು ಅನೇಕ ಬಾರಿ ಸಂಘ ಸಂಸ್ಥೆಗಳು ಸುಮಾರು ವರ್ಷಗಳಿಂದ ಮನವಿ ನೀಡುವದರ ಜೊತೆಗೆ ದೂರವಾಣಿ ಮೂಲಕ ಜಿಲ್ಲಾ ಮಟ್ಟದ ತಾಲೂಕ ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನೆಯಾಗಿಲ್ಲ .

ಈಗಲಾದರು ಸಂಬoಧಪಟ್ಟ ಸಚಿವರು ಇಲಾಖೆ ಅಧಿಕಾರಿಗಳು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಕುರಿತು ಪರಿಶೀಲನೆ ಮಾಡಿ ಎಂಬಿಬಿಎಸ್ ವೈದ್ಯರನ್ನು ಸಿಬ್ಬಂದಿಗಳನ್ನು ನೇಮಕ ಮಾಡುವದರ ಜೊತೆಗೆ ಹೆರಿಗೆ ಕೊಠಡಿ ಉದ್ಘಾಟನೆ ಮಾಡಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ಕಾದು ನೋಡಬೇಕು

“ವೈದ್ಯರ ಹಾಗೂ ಸಿಬ್ಬಂದಿಗಳ ಸಮಸ್ಯೆ ಕುರಿತು ಸಚಿವರಿಗೆ ಮನವಿ ಪತ್ರ ನೀಡಿದ್ದೇವೆ ಆದರೆ ಇಲಾಖೆ ಅಧಿಕಾರಿಗಳು ಗಮನಹಿರಿಸಿಲ್ಲ ನಿರ್ಲಕ್ಷವಹಿಸಿದರೆ ಕರುನಾಡ ವಿಜಯ ಸೇನೆ ಸಂಘಟನೆಯಿoದ ಮಾಕಾಪೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರತಿಭಟನೆ ಮಾಡಲಾಗುವದು. -ಸಂಗನಗೌಡ ಪಾಟೀಲ್ ಅಧ್ಯಕ್ಷರು ಹಾಗೂ ಹೂನೂರು ಗ್ರಾಮ ಪಂಚಾಯತಿ ಉಸ್ತುವಾರಿಗಳು”

Related Articles

Leave a Reply

Your email address will not be published. Required fields are marked *

Back to top button