
30 ಎಕರೆ ಕೆರೆ ಭೂಮಿ ಭೂ ಗಳ್ಳರಿಂದ ಒತ್ತುವರಿ ಯಾಗಿದೆ
ಮಾನ್ವಿ ತಹಸೀಲ್ದಾರ್ ರಾಜು ಫಿರಂಗಿ, ಕುರ್ಡಿ ನಾಡ ತಹಸೀಲ್ದಾರ್ ಅಬ್ದುಲ್ ರೌಫ್ ಕರ್ತವ್ಯ ನಿರ್ಲಕ್ಷ್ಯಕ್ಕೆ
ಕನ್ನಡಿ ಯಾಗಿದೆ ಈ ಘಟನೆ
ಮಾನ್ವಿ ತಾಲೂಕಿನ ರಾಜಲಬಂಡಾ ಗ್ರಾಮದ ಕಥೆ ಇದು
ರಾಜಲಬಂಡಾ ಗ್ರಾಮದ ನಡ್ಡಿ ಭೀಮಣ್ಣ ಅವರ ಗಂಭೀರ ಆರೋಪ
ರಾಜಲಬಂಡಾ ಸೀಮಾದಕ್ಕೆ ಸೇರಿದ ಸರ್ವೆ ನಂಬರ್ 47,48ರ ಕೆರೆ ಒತ್ತುವರಿ
ಇದು ಯಾಕೋ ಅತಿಯಾತ್ತು
ಜಾನುವಾರುಗಳಿಗೆ ಕುಡಿಯಲು ಮೀಸಲಿದ್ದ ಕೆರೆಯನ್ನೆ ಸ್ವಾರ್ಥಿ ಭೂಗಳ್ಳರು ಒತ್ತುವರಿ ಮಾಡಿದ್ದಾರೆ
ಜಾನುವಾರುಗಳಿಗೆ ಕುಡಿಯಲು ಮೀಸಲಿಟ್ಟಿದ್ದ 30 ಎಕರೆ ಕೆರೆಯನ್ನೆ ರಾಜಲಬಂಡಾ ಗ್ರಾಮದಲ್ಲಿ ಭೂಗಳ್ಳರು ಒತ್ತುವರಿ ಮಾಡಿ ನುಂಗುತ್ತಿದ್ದು, ರಾಯಚೂರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರೂ ಸೂಕ್ತ ತನಿಖೆ ಮಾಡಿ ಕ್ರಮಕ್ಕೆ ಮುಂದಾಗದೆ ಆಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆ
ಮಾನ್ವಿ ತಾಲೂಕಿನ ರಾಜಲಬಂಡಾ ಗ್ರಾಮದ ಸರ್ವೆ ನಂಬರ್ 47 ಮತ್ತು48 ರಲ್ಲಿ ಜಾನುವಾರುಗಳಿಗೆ ಕುಡಿಯಲು ಸರಕಾರ ಜಮೀನು ಮೀಸಲಿಟ್ಟರೆ,ಆದರೆ ರಾಜಲಬಂಡಾ ಗ್ರಾಮದ ಕೆಲ ಬಲಾಢ್ಯರು ಕೆರೆಯನ್ನೆ ನುಂಗುತ್ತಿದ್ದಾರೆ.
ಮಾನ್ವಿ ತಹಸೀಲ್ದಾರ್ ರಾಜು ಫಿರಂಗಿ ಹಾಗು ಕುರ್ಡಿ ನಾಡ ತಹಸೀಲ್ದಾರ್ ರಾಜು ಫಿರಂಗಿ ಅವರು ಭೂಗಳ್ಳರ ವಿರುದ್ಧ ಕ್ರಮ ಜರುಗಿಸದೆ ಇರುವುದು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಕಾರಣ ಪುರಾತನ ಕಾಲದ ಕೆರೆ ಮಾಯವಾ
ಗೋದು ಗ್ಯಾರಂಟಿ ಎಂದು ರಾಜಲಬಂಡಾ ಗ್ರಾಮದ ಮುಖಂಡ ನಡ್ಡಿ ಭೀಮಣ್ಣ ಆರೋಪಿಸಿದ್ದಾರೆ.
ರಾಜಲಬಂಡಾ ಗ್ರಾಮದ ಕೆರೆಯನ್ನು ಯಾರು ಒತ್ತುವರಿ ಮಾಡಿದ್ದಾರೆ ಅಂತಹ ಭೂಗಳ್ಳರ ವಿರುದ್ಧ ರಾಯಚೂರು ಜಿಲ್ಲಾಡಳಿತ ಕ್ರಮ ಜರುಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.