ಬಿಜಾಪುರ

ನಿನ್ನೆ ರಾತ್ರಿ 5 ಮನೆಗಳಲ್ಲಿ ಕಳ್ಳತನ

ನಿನ್ನೆ ತಡರಾತ್ರಿ ವಿಜಯಪುರದಲ್ಲಿ 5 ಮನೆಗಳಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ.

ನಿನ್ನೆ ರಾತ್ರಿ ವಿಜಯಪುರ ನಗರದ ಅಕ್ಕಮಹಾದೇವಿ ಶಾಲೆಯ ಬಳಿ ಜಮಖಂಡಿ ರಸ್ತೆಯಲ್ಲಿರುವ 5 ಮನೆಗಳಲ್ಲಿ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಎರಡು ಮನೆಗಳಿಂದ 3 ತೊಲ ಚಿನ್ನ, ಬೆಳ್ಳಿ ಮತ್ತು ೬೫೦೦೦ ನಗದು ಹಣದೊಂದಿಗೆ ಕಳ್ಳರು ಪರಾರಿಯಾಗಿರುವುದಾಗಿ ತಿಳಿಸಿದರು..

ಇಲ್ಲಿನ ಮನೆಗಳ ಸುತ್ತ ಲೈಟ್‌ಗಳಿಲ್ಲದ ಕಾರಣ ಹಲವೆಡೆ ಕಳ್ಳರು ಸುಲಭವಾಗಿ ಪರಾರಿಯಾಗುತ್ತಿದ್ದು, ಕಳ್ಳತನದ ಪ್ರಕರಣ ಇಲ್ಲಿ ಸಾಮಾನ್ಯವಾಗುತ್ತಿವೆ.

ಘಟನೆ ನಡೆದಾಗ ಮನೆಯಲ್ಲಿದ್ದವರೆಲ್ಲ ಹೊರಗೆ ಹೋಗಿದ್ದರು ಎಂದು ತಿಳಿಸಿದರು..

Related Articles

Leave a Reply

Your email address will not be published. Required fields are marked *

Back to top button