ಚಿಕ್ಕೋಡಿ
ಯುಗಾದಿ ಹಿನ್ನಲೆ, ಯಡೂರ ಶ್ರೀವೀರಭದ್ರೇಶ್ವರ ದರ್ಶನ ಪಡೆದ ಭಕ್ತ ವೃಂಧ.

ಚಿಕ್ಕೋಡಿ: ಇವತ್ತು ಯುಗಾದಿ ಹಬ್ಬ ಇದು ಹೊಸ ವರ್ಷದ ಆರಂಭ ಈ ಹಿನ್ನಲೆಯಲ್ಲಿ ಭಕ್ತರು ಚಿಕ್ಕೋಡಿ ತಾಲೂಕಿನ ಯಡೂರ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆದು ಪಾವನರಾದರು.
ಯುಗಾದಿ ಹಬ್ಬವು ಭಾರತೀಯರ ಪಾಲಿಗೆ ವಿಶೇಷ ಹಬ್ಬ. ಚೈತ್ರ ಮಾಸ ಮೊದಲ ದಿನ ಆಚರಿಸುವ ಯುಗಾದಿ ಹಬ್ಬವನ್ನು ಇವತ್ತು ಆಚರಿಸಲಾಗುತ್ತಿದೆ.ಹೊಸ ಪ್ರಾರಂಭದ ದಿನ ಭಕ್ತರು ದಕ್ಷಿಣದ ಕಾಶೀ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ-ಭದ್ರಕಾಳಿ ದೇವಿಯ ದರ್ಶನ ಪಡೆದು ಪಾವನರಾದರು.
ಭಕ್ತರು ಸಾಲಿನಲ್ಲಿ ನಿಂತು,ಶಾಂತಿಯುತವಾಗಿ ದರ್ಶನ ಪಡೆದರು.ಯುಗಾದಿ ಹಿನ್ನಲೆಯಲ್ಲಿ ಶ್ರೀವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ,ಪುನಸ್ಕಾರ,ಆರತಿ,ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಮಾಡಲಾಗಿತ್ತು.