
“ವಿಶೇಷಚೇತನ ಮಕ್ಕಳನ್ನು ವಿಶೇಷ ಒಲಂಪಿಕ್ಸ್ ನ ಮುಖ್ಯವಾಹಿನಿಗೆ ತರಲು ಪ್ರಯತ್ನ”
ಯಕ್ಸಂಬಾದಲ್ಲಿ ಸ್ಪೆಷಲ್ ಒಲಪಿಂಕ್ಸ್ ಭಾರತ ಕರ್ನಾಟಕ ಮತ್ತು ಜೊಲ್ಲೆ ಗ್ರೂಪ್ ಸಹಯೋಗದಲ್ಲಿ ವಿಶೇಷ ಮಕ್ಕಳ ರಾಷ್ಟ್ರ ಮಟ್ಟಕೆ ಆಯ್ಕೆಯಾದ ಹಿನ್ನಲೆ ಕ್ರೀಡಾ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ,ಸ್ಕೇಟಿಂಗ್,ಜೂಡೋ,ವಾಲಿಬಾಲ್,ಬ್ಯಾಡ್ಮಿಂಟನ್, ಗೋಲ್ಫ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯದವರನ್ನು ಅಭಿನಂದಿಸಿ,ಶುಭ ಕೋರಲಾಯಿತು.10 ಜಿಲ್ಲೆಗಳಿಂದ 44 ವಿಶೇಷ ಮಕ್ಕಳು ಭಾಗವಹಿಸಿರುವುದು ಹೆಮ್ಮೆಯ ಸಂಗತಿ.
“ಸಮಾಜವು ವಿಶೇಷ ಮಕ್ಕಳನ್ನು ನೋಡುವ ದೃಷ್ಠಿಕೋನವೇ ಬೇರೆಯಾಗಿದೆ. ಅದನ್ನು ತೊಲಗಿಸಿ,ಅವರಿಗೂ ಕೂಡ ಎಲ್ಲರಂತೆ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡುವುದಕ್ಕಾಗಿಯೇ ವಿಶೇಷ ಮಕ್ಕಳಿಗಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ತರಬೇತಿ ಆಯೋಜನೆ ಮಾಡಿದ್ದು,ಇದರಲ್ಲಿ ಆಯ್ಕೆಯಾದ ಮಕ್ಕಳು ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗಹಿಸಿ ನಮ್ಮ ರಾಜ್ಯದ ಹೆಸರು ತರಬೇಕು.
ಈ ಸಭೆಯಲ್ಲಿ ವಿಶೇಷ ಒಲಿಂಪಿಕ್ಸ್ ರಾಜ್ಯದ ವಲಯ ನಿರ್ದೇಶಕರಾದ ಶ್ರೀ ಅಮರೇಂದ್ರ ಎ, ಉಪಾಧ್ಯಕ್ಷರಾದ ಶ್ರೀ ರೂಪಸಿಂಗ್,ಖಜಾಂಚಿಗಳಾದ ಶ್ರೀ ಆನಂದ, ಶ್ರೀ ರಾಜು ಹಿರೇಮಠ,ಶಿಕ್ಷಕರು,ವಿಶೇಷ ಮಕ್ಕಳು ಉಪಸ್ಥಿತರಿದ್ದರು.