
ನಿಪ್ಪಾಣಿ ಮತಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ನ್ಯೂ ಫ್ರೆಂಡ್ಸ್ ಕ್ಲಬ್ ಅತ್ಯಾಧುನಿಕ ವ್ಯಾಯಾಮ ಶಾಲೆಯನ್ನು (ಜಿಮ್)ಉದ್ಘಾಟಿಸಿ, ಜಿಮ್ ವೀಕ್ಷಿಸಿ,ಸತ್ಕಾರ ಸ್ವೀಕರಿಸಲಾಯಿತು.
ನಮ್ಮ ಆರೋಗ್ಯ ಸದೃಡವಾಗಿರಲು ಪೌಷ್ಟಿಕ ಆಹಾರದ ಜತೆಗೆ ವ್ಯಾಯಾಮ ಕೂಡ ಅಷ್ಟೇ ಮುಖ್ಯ.ಯುವಕರು ಇದರ ಸದುಪಯೋಗ ಪಡೆದು ಆರೋಗ್ಯಯುತ ಜೀವನ ನಡೆಸಬೇಕು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಸೌ. ಸೋನಾಲಿ ಕೊಠಡಿಯಾ, ಉಪಾಧ್ಯಕ್ಷರಾದ ಶ್ರೀ ಸಂತೋಷ ಸಾಂಗಾವಕರ,
ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಎಂ.ಪಿ. ಪಾಟೀಲ, ಉಪಾಧ್ಯಕ್ಷರಾದ ಶ್ರೀ ಪವನ ಪಾಟೀಲ, ನಿರ್ದೇಶಕರಾದ ಶ್ರೀ ಅಪ್ಪಾಸಾಹೇಬ ಜೊಲ್ಲೆ, ಶ್ರೀ ರಾಮಗೊಂಡ ಪಾಟೀಲ,
ಶ್ರೀ ಶರದ ಜಂಗಟೆ, ಶ್ರೀ ಯೂನಸ ಮುಲ್ಲಾ, ಶ್ರೀ ಶ್ರೀಕಾಂತ ಬನ್ನೆ, ನಿಪ್ಪಾಣಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಸಿದ್ದು ನರಾಟೆ, ಸ್ಥಳೀಯ ಮುಖಂಡರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.