ಕಾಗವಾಡಬೆಳಗಾವಿರಾಜಕೀಯರಾಜ್ಯ

ಹದಗಟ್ಟಿದೆ. ಕಾಗವಾಡ ಅಥಣಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ

ಕಾಗವಾಡ: ಇಲ್ಲಿಂದ ಅಥಣಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮುರಗುಂಡಿಯವರೆಗಿನ 40 ಕಿ.ಮೀ. ರಸ್ತೆ ಸಂಪೂರ್ಣ ಹದಗಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಇದು ಮೇಲ್ದರ್ಜೆಗೆ ಏರಿದ್ದರೂ, ಕಿರಿದಾಗಿರುವ ಕಾರಣ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.

ವಿಜಯಪುರದಿಂದ ಬೆಳಗಾವಿ, ಮಹಾರಾಷ್ಟ್ರದ ಮೀರಜ್‌, ಸಾಂಗ್ಲಿ, ಕೊಲ್ಹಾಪುರಕ್ಕೆ ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ವಿಶೇಷವಾಗಿ ಆಸ್ಪತ್ರೆಗೆ ತೆರಳಲು ಮತ್ತು ವ್ಯಾಪಾರಕ್ಕೆ ಹೋಗಲು ಈ ರಸ್ತೆಯೇ ಆಸರೆ. ಆದರೆ, ಹಾಳಾದ ರಸ್ತೆ ಸುಧಾರಣೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ವಹಿಸದ್ದರಿಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಇಕ್ಕಟ್ಟಾದ ರಸ್ತೆಯಿಂದ ವಾಹನ ಪಕ್ಕಕ್ಕೆ ಇಳಿದರೆ, ಮತ್ತೆ ರಸ್ತೆಗೇರಲು ಹರಸಾಹಸ ಪಡಬೇಕು. ಗುಂಡಿಗಳಿಂದ ತುಂಬಿದ ರಸ್ತೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕಾಗವಾಡ ಬಸ್ ನಿಲ್ದಾಣ, ಲೋಕೂರ, ಮಂಗಸೂಳಿ, ನವಲಿಹಾಳ ಬಳಿಯಂತೂ ರಸ್ತೆ ಹೇಳತೀರದಷ್ಟು ಕೆಟ್ಟಿದೆ.

ಮಳೆಯಾದರೆ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ನಿಲ್ಲುವ ಕಾರಣ, ಸಂಚಾರಕ್ಕೆ ತೊಡಕಾಗಿದೆ. ಈ ಮಾರ್ಗದಲ್ಲಿ ಸಂಚರಿಸುವಾಗ ಹಲವರು ನಿಯಂತ್ರಣ ತಪ್ಪಿ ಬಿದ್ದು, ಗಾಯಗೊಂಡ ಉದಾಹರಣೆಗಳೂ ಇವೆ.

ಆಮೆಗತಿಯಲ್ಲಿ ಕಾಮಗಾರಿ: ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಾರಿಗೆ ಸಚಿವ ನಿತಿನ್ ಗಡ್ಕರಿ 2021ರಲ್ಲೇ ಚಾಲನೆ ನೀಡಿದ್ದಾರೆ. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಸವಾರರಿಂದ ಆಕ್ಷೇಪ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button