
ವಿಜಯಪುರ (Vijayapura) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ವಕೀಲ ಎಸ್ ಎಸ್ ಖಾದ್ರಿ ಹಾಗೂ ಮಾಜಿ ಕಾರ್ಪೊರೇಟರ್ ಅಬ್ದುಲ್ ರಜಾಕ್ ಹೊರ್ತಿ ಮತ್ತು ಇನ್ನಿತರ ಮುಸ್ಲಿಂ ಮುಖಂಡರು, 6 ನೇ ಗ್ಯಾರಂಟಿಯಾಗಿ (6th Guarantee) ಯತ್ನಾಳ ಅವರ ಸಿಡಿ ಬಿಡುಗಡೆ ಮಾಡುತ್ತೇವೆ ಎಂದರು.
ದಸರಾ ಹಬ್ಬದಂದ ದುಷ್ಟಶಕ್ತಿ ಸಂಹಾರ
ಸುದ್ದಿಗೋಷ್ಠಿಯಲ್ಲಿ ವಕೀಲ ಎಸ್ ಎಸ್ ಖಾದ್ರಿ ಅವರು, ಇಂದು ದಸರಾ ಹಬ್ಬ, ಆದ್ದರಿಂದ ದುಷ್ಟಶಕ್ತಿಯನ್ನು ಸಂಹಾರ ನಡೆಸುತ್ತೆವೆ. ಆದಕ್ಕಾಗಿ ಸಿಡಿ ಬಿಡುಗಡೆ ಮಾಡುತ್ತೆವೆ. ನಾನೇನು ಬ್ಲಾಕ್ಮೇಲ್ ಮಾಡುತ್ತಿಲ್ಲ, ಶಾಸಕರಾಗಿ ಇನ್ನುಳಿದಿರುವ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಬೇಕು. ಅವರೇನು ಕೋರ್ಟ್ ನಿಂದ ತಮ್ಮ ವಿರುದ್ದ ಮಾನಹಾನಿ ವರದಿ ಪ್ರಸಾರ ಮಾಡದಂತೆ ತಡಯಾಜ್ಞೆ ತಂದಿದ್ದಾರಲ್ಲ ಅದು ನಮ್ಮ ಬಳಿಯು ಇದೆ. ಅದನ್ನು ಬಿಡುಗಡೆ ಮಾಡುತ್ತೆವೆ ಎಂದು ಅವ್ಯಾಚ ಶಬ್ದಗಳಿಂದ ಟೀಕಿಸಿದರು.
ವಕ್ಪ ಆಸ್ತಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ
ಇದಕ್ಕೂ ಮೊದಲು ವಿಜಯಪುರದಲ್ಲಿ ಎರಡು ದಿನಗಳ ಕಾಲ ವಕ್ಪ ಅದಾಲತ್, ವಕ್ಪ ಇಲಾಖೆ ಸಭೆ ನಡೆಸಿದ್ದ ಸಚಿವ ಜಮೀರ್ ಅಹ್ಮದ್, ವಕ್ಪ ಆಸ್ತಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ, ಪಹಣಿಗಳಲ್ಲಿ ಖಾತೆ ಬದಲಾವಣೆ, ಫ್ಲ್ಯಾಗಿಂಗ್ ಕಾರ್ಯಕ್ಕೆ ಆದೇಶ ನೀಡಿ 45 ಕಾರ್ಯ ಮುಗಿಸುವಂತೆ ಸೂಚನೆ ನೀಡಿದ್ದರು. ಇದಕ್ಕೆ ವಿರೋಧವಾಗಿ ದೊಡ್ಡ ಮಟ್ಟದ ಹೋರಾಟಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದು, ವಿಜಯಪುರದ ಬಳಿಕ ರಾಜ್ಯಾದ್ಯಂತ ಹೋರಾಟ ವಿಸ್ತರಣೆ ಮಾಡಲು ನಿರ್ಧಾರ ಮಾಡಿದ್ದು, ಸಚಿವ ಜಮೀರ್ ಸಭೆ ಮಾಡಿರುವ ಎಲ್ಲ ಜಿಲ್ಲೆಗಳಲ್ಲಿಯೂ ಹೋರಾಟ ಮಾಡಲು ನಿರ್ಧಸಿರಿದ್ದಾರೆ.
ವಕ್ಫ್ ಹಠಾವೋ ದೇಶ ಬಚಾವೋ ಆಂದೋಲನ
ಇದಕ್ಕೆ ವಿರೋಧವಾಗಿ ದೊಡ್ಡ ಮಟ್ಟದ ಹೋರಾಟಕ್ಕೆ ಬಿಜೆಪಿ ನಾಯಕರು, ಚಿಂತಕರು, ಹಿಂದೂ ಪರ ಸಂಘಟನೆಗಳು ಮುಂದಾದಗಿದ್ದು, ನಾಳೆ ವಿಜಯಪುರ ನಗರದ ಸಿದ್ದೇಶ್ವರ ದೇಗುಲದಲ್ಲಿ ಬಿಜೆಪಿ ವಿಜಯಪುರ ನಗರ ಶಾಸಕ ಯತ್ನಾಳ ಅವರ ನೇತೃತ್ವದಲ್ಲಿ ವಕ್ಫ್ ಮಂಡಳಿ ವಿರುದ್ದ ವಕ್ಫ್ ಹಠಾವೋ ದೇಶ ಬಚಾವೋ ಆಂದೋಲನ ಪ್ರತಿಭಟನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಹಾಗೂ ನಮೋ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸಲಿದ್ದಾರೆ.