ರಾಜಕೀಯರಾಜ್ಯ

ಖಾಸಗಿ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಧರಣಿ

ಕನ್ನಡಿಗರಿಗೆ ಖಾಸಗಿ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯ ಮನವಿ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ನೀಡಲಾಯಿತು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಜಾರಿ ಮಾಡಲು ಹಲವು ಸಾಂವಿದಾನಿಕ ತೋಡಕುಗಳು ಇರುವುದರಿಂದ,ಸರ್ಕಾರದ ಅಡ್ವಿಕೇಟ್ ಜನರಲ್ ರವರ ಬಳಿ ಚರ್ಚಿಸಿ ಉದ್ಯೋಗ ಮೀಸಲಾತಿ ನೀಡಲು ಕ್ರಮಜರುಗಿಸುತ್ತೇವೆ ಎಂಬ ಭರವಸೆ ನೀಡಿದರು.

ನಿಯೋಗದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾದ್ಯಕ್ಷರಾದ ಶ್ರೀ ಸಾ.ರಾ.ಗೋವಿಂದಣ್ಣನವರು,ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಕಾನೂನು ಸಲಹೆಗಾರರಾದ ಡಾ.ಕೆ.ಪಿ.ವೆಂಕಟೇಶ್ ರವರು, ಯುವಘಟಕದ ರಾಜ್ಯಾದ್ಯಕ್ಷರಾದ ಎಸ್.ಕೆ.ಗೌರೀಶ್,ಮತ್ತು ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಶ್ರೀಮತಿ ಕವಿತಾ ಪೇಟೆಮಟ್ ಇದ್ದರು.

 

ಇಂದಿನ ಹೋರಾಟಕ್ಕೆ,ಬೆಳಗಾವಿ,ದಾರಾವಾಡ,ಹಾವೇರಿ,ದಾವಣಗೆರೆ,ತುಮಕೂರು,ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರಜಿಲ್ಲೆ,ಚಿಕ್ಕಬಳ್ಳಾಪುರ,ಕೊಪ್ಪಳ,ರಾಯಚೂರು ಜಿಲ್ಲೆಗಳಿಂದ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲಾ ನನ್ನ ಪ್ರೀತಿಯ ಹೋರಾಟದ ಸೇನಾನಿಗಳಿಗೆ ಕ್ರಾಂತಿಕಾರಕ ವಂದನೆಗಳು

ಹೋರಾಟ ನಿಲ್ಲದು,ಕುಗ್ಗದು,ಯಾರಿಗೂ ಬಾಗದು

Related Articles

Leave a Reply

Your email address will not be published. Required fields are marked *

Back to top button