Uncategorizedರಾಜಕೀಯರಾಜ್ಯ

ಬೀಗ ಮುರಿದು ತಿಜೋರಿಯಲ್ಲಿದ್ದ ಚಿನ್ನಾಭರಣ, ನಗದು ಕಳವು:7 ತೊಲೆ ಚಿನ್ನಾಭರಣ, ₹ 2 ಲಕ್ಷ ಹಣ ಕಳವು

ಗೋಕಾಕ: ತಾಲ್ಲೂಕಿನ ತೆಳಗಿನಹಟ್ಟಿಯ ತೋಟದ ಮನೆಯೊಂದರ ಬೀಗ ಮುರಿದು ತಿಜೋರಿಯಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ.

7 ತೊಲೆ ತೂಕದ ₹5.32 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹2 ಲಕ್ಷ ನಗದು ಕಳವು ಮಾಡಿದ ಕಳ್ಳರು ಪರಾರಿಯಾಗಿದ್ದಾರೆ.

ತೆಳಗಿನಹಟ್ಟಿ ಗ್ರಾಮದ ನಿವಾಸಿ ಭೀಮಪ್ಪ ಫಕೀರಪ್ಪ ದಳವಾಯಿ ಅವರು ತಾಲ್ಲೂಕಿನ ಅಂಕಲಗಿ ಪೊಲೀಸ್ ಠಾಣೆಯ‌ಲ್ಲಿ ದೂರು ದಾಖಲಿಸಿದ್ದಾರೆ.

 

ಜೆಸಿಬಿ ಚಾಲಕನ ವಿರುದ್ಧ ಪ್ರಕರಣ: ಮಕ್ಕಳನ್ನು ಕೂರಿಸಿಕೊಂಡು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಜೆಸಿಬಿ ಚಲಾಯಿಸಿದ ಚಾಲಕನ ವಿರುದ್ಧ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಾರಹಟ್ಟಿ ನಿವಾಸಿ ಖಾದಿರಸಾಬ ಮೌಲಾಲಿ ಮುಲ್ಲಾ ಎಂಬಾತ ಈಚೆಗೆ ತಾಲ್ಲೂಕಿನ ಮಾಲದಿನ್ನಿ ಹಳ್ಳ ತುಂಬಿ ಹರಿಯುತ್ತಿದ್ದ ವೇಳೆ ಈ ದುಸ್ಸಾಹಸ ಮಾಡಿದ್ದಾನೆ ಎಂದು ಗ್ರಾಮೀಣ ಠಾಣೆಯ ಕಾನ್‌ಸ್ಟೆಬಲ್‌ ಡಿ.ಬಿ.ಅಂತರಗಟ್ಟಿ ದೂರು ದಾಖಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button