Uncategorized
ವೈಯುಕ್ತಿಕ ದ್ವೇಷ ಚಾಕು ಇರಿದು ಬರ್ಬರವಾಗಿ ಕೊ*ಲೆ

ಬೈಲಹೊಂಗಲ: ವೈಯುಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಯುವಕನನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ ಘಟನೆ ಪಟ್ಟಣದ ಹೊರವಲಯದ ಬಸವೇಶ್ವರ ಆಶ್ರಯ ಕಾಲೋನಿಯಲ್ಲಿ ಭಾನುವಾರ (ನ.03) ರಾತ್ರಿ ನಡೆದಿದೆ.
ಬಸವೇಶ್ವರ ಆಶ್ರಯ ಕಾಲೋನಿ ನಿವಾಸಿ ರವಿ ತಿಮ್ಮಣ್ಣವರ (23) ಕೊಲೆಯಾದ ವ್ಯಕ್ತಿ .
ಸುಮಾರು 10 ರಿಂದ 13 ಜನ ಯುವಕರ ಗುಂಪು ಯುವಕನ ಮೇಲೆ ಚಾಕುವಿನಿಂದ ಇರಿದು ಕೊಲೆ ಗೈದಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.