Uncategorized
ಕೇವಲ ನಾಲ್ಕು ಜನರು ಕೇಂದ್ರ ಸರಕಾರ ನಡೆಸುತ್ತಿದ್ದಾರೆ..

ರಾಂಚಿ: ಬಿಜೆಪಿಗೆ ಪ್ರತಿಪಕ್ಷಗಳ ಮೇಲೆ ದಬ್ಬಾಳಿಕೆ ಮಾಡಿ, ಚುನಾಯಿತ ಸರ್ಕಾರಗಳನ್ನು ಉರುಳಿಸಿ ಶಾಸಕರನ್ನು ಮೇಕೆಗಳಂತೆ ಖರೀದಿಸುವಲ್ಲಿ ಆಸಕ್ತಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಖರ್ಗೆ ‘ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸರ್ಕಾರವನ್ನು ಅದಾನಿ ಮತ್ತು ಅಂಬಾನಿ ಜತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
“ನಿಜವಾದ ಯೋಗಿಯು ”batenge toh katenge” (ವಿಭಜನೆಯಾದರೆ, ನಾವು ನಾಶವಾಗುತ್ತೇವೆ) ಎಂಬ ಭಾಷೆಯನ್ನು ಬಳಸುವುದಿಲ್ಲ. ಈ ಭಾಷೆಯನ್ನು ಉಗ್ರರು ಬಳಸುತ್ತಾರೆ. ಯೋಗಿ ಮಠದ ಮುಖ್ಯಸ್ಥನಾಗಿ ಕೇಸರಿ ವಸ್ತ್ರ ಧರಿಸುತ್ತಾರೆ.ಆದಿತ್ಯನಾಥ್ ಅವರು ಕುರಿಮರಿಯ ವೇಷದಲ್ಲಿರುವ ತೋಳ’ ಎಂದು ಕಿಡಿ ಕಾರಿದರು.