
ಮಾನ್ವಿ ಹೋಟೆಲ್ ಧಾಭಾಗಳಲ್ಲಿ ಮನೆ ಬಳಕೆ ಸಿಲಿಂಡರ್
ಗೃಹ ಬಳಕೆ ಸಿಲಿಂಡರ್ ಹೋಟಲ್,ಧಾಭಾಗಳಲ್ಲಿ ಬಳಕೆ
ಹಣ ಗಳಿಸಿಕೊಳ್ಳಲುಕ ಸರ್ಕಾರ ಇಲಾಖೆಗೆ ಮೋಸ
ಕಮರ್ಷಿಯಲ್ ಸಿಲಿಂಡರ್ ಕೊಳ್ಳದೆ
ಗೃಹ ಬಳಕೆ ಸಿಲಿಂಡರ್ ಬಳಕೆ
ರಾಯಚೂರು ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ರಿಂದ ಕರ್ತವ್ಯ ಲೋಪ
ಕೃಷ್ಣಪ್ಪ ವಿರುದ್ಧ ಸಾರ್ವಜನಿಕರು, ವಿಚಾರವಾದಿಗಳಿಂದ ಗಂಭೀರ ಆರೋಪ
ಹೋಟೆಲ್, ಡಾಭಾಗಳಲ್ಲಿ ಗೃಹ ಬಳಕೆ ಸಿಲಿಂಡರ್ ಬ್ಲಾಸ್ಟ್ ಆದರೆ ಯಾರು ಹೊಣೆ ಕೃಷ್ಣಪ್ಪ ಎಂದು ಪ್ರಶ್ನೆ
ಸಾಲ ಸಾಲು ಇಲಾಖೆ
ಸಮಸ್ಯೆಗಳು ಇದ್ದರು
ಮಾನ್ವಿ ತಾಲೂಕು ಮರೆತ ಅಧಿಕಾರಿಗಳು
ಮಾನ್ಯ ಆಹಾರ ಇಲಾಖೆ ಸಚಿವರು
ಅಧಿಕಾರಿ ಕ್ರಿಷ್ಣಪ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾರಾ?
ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ವಿರುದ್ಧ ಬುದ್ಧಿ ಜೀವಿಗಳು ಮತ್ತು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.
ಗೃಹಬಳಕೆ ಸಿಲಿಂಡರ್ ಮನೆಗಳಿಗೆ ಸಕಾಲಕ್ಕೆ ತಲುಪಿಸದೆ ಸಿಲಿಂಡರ್ ಗಳನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ಹೋಟೆಲ್, ಡಾಭಾಗಳಿಗೆ ಗೃಹ ಬಳಕೆ ಗ್ಯಾಸ್
ಸಿಲಿಂಡರ್ಗಳನ್ನು ಸರಬರಾಜು ಮಾಡುತ್ತಿದ್ದಾರೆ
ಮಾನ್ವಿ ತಾಲೂಕಲ್ಲಿ
ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪರ ದುರಾಡಳಿತದಿಂದ ಡಾಭಾ,ಹೋಟೆಲ್ ಹಾಗು ಕಾರ್ಖಾನೆಗಳಿಗೆ ಗೃಹ ಬಳಕೆ ಸಿಲಿಂಡರ್ ಸರಬರಾಜಾಗುವುದು ಒಂದು ಕಡೆಯಾದರೆ,
ಇಂತಹ ಸಿಲೆಂಡರಗಳು ಬ್ಲಾಸ್ಟ್ ಆದರೆ ಯಾವುದೇ ಜೀವ ಹಾನಿಯಾದರೇ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದರಿಂದ ಕ್ರಮ ಜರುಗಿಸುವ ಬದಲು ನಮಗೆ ಯಾಕೆಬೇಕು ಎಂದು ಸುಮ್ಮನಿರುವುದು ನೋಡಿದರೇ
ಇವರು ಜನರ ಸೇವಕರೋ ಅಥವಾ ಜನರ ಭಕ್ಷಕರೋ ಎಂದು ತಿಳಿಯಬೇಕಾಗಿದೆ.
ಇಂತಹ ಕರ್ತವ್ಯ ಮರೆತ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಮಾನ್ಯ ಆಹಾರ ಇಲಾಖೆಯ ಸಚಿವರು ಯಾವ ಕ್ರಮಕ್ಕೆ ಮುಂದಾಗುತ್ತಾರೆ ಕಾದು ನೋಡಬೇಕಾಗಿದೆ .