ಮಾನ್ವಿ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷರಾಗಿ ಮಹೆಬೂಬ್ ಖುರೇಷಿ ಆಯ್ಕೆ

ಮಾನ್ವಿ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷರಾಗಿ ಮಹೆಬೂಬ್ ಖುರೇಷಿ ಆಯ್ಕೆ
ಸಂಘದ ಸಿದ್ಧಾಂತದಂತೆ ನಡೆಯುವೆ ಎಂದ ಮಹೆಬೂಬ್ ಖುರೇಷಿ
ಕಾರ್ಯಾಧ್ಯಕ್ಷರಾಗಿ ಎಂ.ಡಿ.ಫಯಾಜ್ ಆಯ್ಕೆ
ರಾಜ್ಯ ಸಂಚಾಲಕ ಸೈಯದ್ ಹುಸೇನ್ ಸಾಹೇಬ್ ಭಾಗಿ
ಸರ್ವ ಜನಾಂಗಕ್ಕೆ ಸೇವೆ ಸಲ್ಲಿಸುವಂತೆ ಸೈಯದ್ ಹುಸೇನ್ ಸಲಹೆ
ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷರಾಗಿ ಮಹೆಬೂಬ್ ಖುರೇಷಿ ಹಾಗು ಗೌರವಾಧ್ಯಕ್ಷರಾಗಿ ಎಂ.ಡಿ.ಫಯಾಜ್ ಅವರನ್ನು ಆಯ್ಕೆ ಮಾಡಲಾಗಿದ್ದು,ಸಂಘದ ಬದ್ಧತೆಯಂತೆ ನಡೆಯಬೇಕು ಎಂದು ಟಿಪ್ಪು ಸುಲ್ತಾನ್ ಸಂಘದ ರಾಜ್ಯ ಸಂಚಾಲಕ ಸೈಯದ್ ಹುಸೇನ್ ಸಾಹೇಬ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಿಪ್ಪು ಸುಲ್ತಾನ್ ಸಂಘದ ಪದಾಧಿಕಾರಿಗಳನ್ನಿ ಆಯ್ಕೆ ಮಾಡಿ ಮಾತನಾಡಿ, ಸಂಘದ ಅಧ್ಯಕ್ಷರಾಗಿ ಮುಂದುವರಿಯುವುದರ ಜೊತೆಗೆ ಶೋಷಿತ ಜನಾಂಗದವರಿಗೆ ಅನ್ಯಾಯವಾದರೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು.
ನೂತನ ತಾಲೂಕಾಧ್ಯಕ್ಷ ಮಹೆಬೂಬ್ ಖುರೇಷಿ ಮಾತನಾಡಿ, ನನಗೆ ತಾಲೂಕಾಧ್ಯಕ್ಷ ಸ್ಥಾನ ನೀಡಲಾಗಿದ್ದು,ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದರ ಜೊತೆಗೆ ಎಲ್ಲಾ ಜಾತಿಯ ಜನಾಂಗದವರಿಗೆ ಅನ್ಯಾಯವಾದರೆ ಅವರ ಜೊತೆ ನಿಂತು ಹೋರಾಟ ಮಾಡುವ ಕೆಲಸ ಮಾಡುತ್ತೇನೆ ಎಂದರು.