ಬೆಳಗಾವಿ

ಆ ಶಬ್ದವನ್ನು ಸಿಟಿ ರವಿ ಒಮ್ಮೆ ಅಲ್ಲ, ಹತ್ತು ಬಾರಿ ಹೇಳಿದರು. ನನ್ನ ತೇಜೋವಧೆ ಮಾಡಿದರು.

ಬೆಳಗಾವಿ: ನಿನ್ನೆ ವಿಧಾನಪರಿಷತ್​ನಲ್ಲಿ ನಡೆದ ಘಟನೆ ಸಂಬಂಧ ಇಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿದರು. ಸದನದಲ್ಲಿ ಈ ವಿಚಾರ ಯಾರೂ ಖಂಡಿಸದೇ ಇರುವುದನ್ನು ನೆನೆದು ಗದ್ಗದಿತರಾದರು.

ಬಿಜೆಪಿ ಸದಸ್ಯ ಸಿ.ಟಿ. ರವಿ ಅಶ್ಲೀಲ ಪದ ಪ್ರಯೋಗದ ಹಿನ್ನೆಲೆ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ‌ ನಡೆಸಿದ ಲಕ್ಷ್ಮಿ ಹೆಬ್ಬಾಳ್ಕರ್​ ಅವರು, “ಡಾ.ಬಿ. ಆರ್. ಅಂಬೇಡ್ಕರ್​ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ

ಎಂದು ನಾವು ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದೆವು. ಧರಣಿ ಮಾಡಿ ಮುಗಿದು ನಾವು ಕುಳಿತಿದ್ದೆವು. ನನ್ನ ಸೀಟ್​ ಮೇಲೆ ಸುಮ್ಮನೆ ಕುಳಿತಿದ್ದೆ.

ಆಗ ರಾಹುಲ್​ ಗಾಂಧಿ ಬಗ್ಗೆ ಡ್ರಗ್​ ಎಡಿಕ್ಟ್​ ಅಂತ ಸಿಟಿ ರವಿ ಅವರು ಅಂದರು. ತಾವು ಸಹ ಅಪಘಾತ ಮಾಡಿದ್ದೀರಿ, ತಾವೂ ಸಹ ಕೊಲೆಗಾರ ಆಗುತ್ತೀರಿ, ಅಂದೆ. ನನಗೆ ಬಳಿಕ ಆ ಶಬ್ದವನ್ನು ಸಿಟಿ ರವಿ ಒಮ್ಮೆ ಅಲ್ಲ, ಹತ್ತು ಬಾರಿ ಹೇಳಿದರು. ನನ್ನ ತೇಜೋವಧೆ ಮಾಡಿದರು.

ಇದಕ್ಕೆಲ್ಲ ನಾನು ಹೆದರುವುದಿಲ್ಲ” ಎನ್ನುತ್ತಲೇ ಆ ಘಟನೆ ನೆನೆದು ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕರಾದರು.

Related Articles

Leave a Reply

Your email address will not be published. Required fields are marked *

Back to top button