Uncategorized

ವಿಧಾನ ಪರಿಷತ್ತಿನಲ್ಲಿ ‘ಈ’ ರೀತಿ ಘಟನೆ ನಡೆಯಬಾರದಿತ್ತು… ತಪ್ಪು ಕಂಡು ಬಂದಲ್ಲಿ ಕ್ರಮ – ಸಭಾಧ್ಯಕ್ಷ ಹೊರಟ್ಟಿ…

ಸದನಕ್ಕೆ ಸಂಬಂಧಿಸಿದ ವಾಹಿನಿಯಲ್ಲಿ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಕೆ ಕುರಿತು ಎಲ್ಲಿಯೂ ರಿಕಾರ್ಡ್ ಆಗಿಲ್ಲ. ಬೇರೆ ವಾಹಿನಿಗಳನ್ನು ಪರಿಶೀಲಿಸಿ ಒಂದು ವೇಳೆ ಅಂತಹದ್ದೇನಾದರೂ ಕಂಡು ಬಂದರೇ ಕ್ರಮಕೈಗೊಳ್ಳಬಹುದಾಗಿದೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷರಾದ ಬಸವರಾಜ್ ಹೊರಟ್ಟಿ ಹೇಳಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿರುವ ಮಾಹಿತಿಯನ್ನು ನನಗೆ ನೀಡಿದ್ದಾರೆ. ಸದನ ಕಲಾಪ ಮುಂದೂಡಿಕೆಯಾದಾಗ ನಮ್ಮ ವಾಹಿನಿಯ ಪ್ರಕ್ರಿಯೆ ಸ್ಥಗಿತಗೊಳ್ಳುತ್ತದೆ. ಬೇರೆ ವಾಹಿನಿಗಳಲ್ಲಿಯೂ ಪರಿಶೀಲಿಸುತ್ತೇನೆ.

ಅದರಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಸದನದಲ್ಲಿ ಈ ರೀತಿಯಾಗಬಾರದಿಗಿತ್ತು. ಸರಿ ತಪ್ಪು ತಿಳಿಯಲು ನಮ್ಮಲ್ಲಿರುವ ಕಮೀಟಿಗೆ ಕಳುಹಿಸುತ್ತೇವೆ. ಆಕ್ಷೇಪಾರ್ಹ ಪದ ಬಳಕೆಯಾಗಿದ್ದರೇ, ಈ ಕುರಿತು ಏಥಿಕ್ಸ್ ಕಮೀಟಿಯಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button