ಮಾಜಿ ಪಿಎಂ ಮನಮೋಹನಸಿಂಗ್ ಕಾರ್ಯ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿದೆ- ಡಿಸಿಎಂ ಡಿ.ಕೆ.ಶಿವಕುಮಾರ

ದೇಶದ ಮಾಜಿ ಪಿಎಂ ಮನಮೋಹನಸಿಂಗ್ ಅವರ ಕಾರ್ಯ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿದೆ. ಜ್ಯಾತ್ಯಾತೀತವಾಗಿ ಗಣ್ಯರು ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದು, ಅವರ ವ್ಯಕ್ತಿತ್ವವನ್ನು ಮತ್ತೋಮ್ಮೆ ಸ್ಪಷ್ಟಪಡಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ಅವರು ದೆಹಲಿಯಲ್ಲಿಂದು ಮಾಧ್ಯಮಗಾರರೊಂದಿಗೆ ಮಾತನಾಡಿದರು. ದಿವಂಗತ ಮನಮೋಹನ ಸಿಂಗ್ ಅವರ ವ್ಯಕ್ತಿತ್ವ ಇಂದು ಜಗತ್ತಿಗೆ ಮತ್ತೊಮ್ಮೆ ಗೊತ್ತಾಗಿದೆ. ಅವರ ಅಂತ್ಯಕ್ರಿಯೆಯಲ್ಲಿ ಪಕ್ಷ-ವಿಪಕ್ಷದ ನಾಯಕರು ಭಾಗಿಯಾಗಿರುವುದು ಅವರ ವ್ಯಕ್ತಿತ್ವವನ್ನು ಸ್ಪಷ್ಟಪಡಿಸುತ್ತದೆ. ಸಂವಿಧಾನಬದ್ಧವಾಗಿ ಅವರು ದೇಶದ ಪ್ರತಿಯೊಬ್ಬ ನಾಗರೀಕರಿಗೂ ಹಕ್ಕನ್ನು ನೀಡಿದ್ದಾರೆ. ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ರೈತರ ಹಕ್ಕು, ಆಹಾರ ಸುರಕ್ಷಾ ಕಾಯ್ದೆ, ಭೂಮಿಯನ್ನು ಕಳೆದುಕೊಂಡವರಿಗೆ ದುಪಟ್ಟು ಪರಿಹಾರ ಪಡೆಯುವ ಅವಕಾಶವನ್ನು ಕಲ್ಪಿಸಿದ್ದು, ಮನಮೋಹನ ಸಿಂಗ್. ದೇಶಕ್ಕಾಗಿ ಇದು ದೊಡ್ಡ ನಿರ್ಣಯ. ಪ್ರತಿಯೊಬ್ಬರು ಅವರ ಯೋಜನೆಗಳ ಸದುಪಯೋಗ ಮಾಡಿದ್ದಾರೆ. ಕಾಂಗ್ರೆಸ್ ಪಾರ್ಟಿ ಅವರಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಲಿದೆ ಎಂದರು.