ಬೆಳಗಾವಿ
ಡಿ.31 ರಂದು ಪಾಶ್ಚಾತ್ಯ ಹೊಸ ವರ್ಷ ಆಚರಿಸದಿರಿ; ಶ್ರೀರಾಮಸೇನೆ ಒತ್ತಾಯ

ಬೆಳಗಾವಿ: ಡಿಸೆಂಬರ್ 31ರ ರಾತ್ರಿ ವಿದೇಶಿ ಹೊಸ ವರ್ಷ ನಿಮಿತ್ಯ ಕುಡಿತ, ಕುಣಿತ, ನಶೆ, ಮಾದಕವಸ್ತುಗಳ ಸೇವನೆ,ಅಶ್ಲೀಲತೆ, ವ್ಯಭಿಚಾರ ಮುಂತಾದ ಅನೈತಿಕ ಚಟುವಟಿಕೆಗಳು ಪ್ರತಿ ವರ್ಷ ನಡೆಯುತ್ತಿವೆ. ಇದೊಂದು ಯುವಜನರನ್ನು ಸಮಾಜ ದಾರಿ ತಪ್ಪಲು ಪ್ರೇರಣೆಯಾಗಿದೆ.
ಇದೊಂದು ಸಜ್ಜನ ಸಮಾಜಕ್ಕೆ ಕಂಟಕ ಮತ್ತು ಅವಮಾನವಾಗಿದೆ. ಈ ವರ್ಷ ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ ಹಿನ್ನೆಲೆಯಲ್ಲಿ ಸರ್ಕಾರ ಜನೆವರಿ 1 ನೇ ತಾರೀಖಿನ ವರೆಗೆ ಶೋಕಾಚರಣೆ ಘೋಷಿಸಿದ್ದು ಈ ಹಿನ್ನೆಲೆಯಲ್ಲಿ ತಮ್ಮ ಹೋಟೆಲ್ ನಲ್ಲಿ ಯಾವುದೇ ಮನೋರಂಜನೆ, ಕುಡಿತ, ಕುಣಿತಕ್ಕೆ ಪಾಶ್ಚಾತ್ಯ ಆಚರಣೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.