“ಡಾ. ಬಾಬಾಸಾಹೇಬ್ ಅಂಬೇಡ್ಕರ್ “ಕಂಚಿನ ಪ್ರತಿಮೆ ಅನಾವರಣ

ಹುಕ್ಕೇರಿ: ಹುಕ್ಕೇರಿ ಪಟ್ಟಣದ ಹಳೆಯ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಣ ಸಮಾರಂಭವನ್ನು ಜನವರಿ 25ರಂದು ಆಯೋಜಿಸಲಾಗಿದೆ. ದಲಿತ ಸಮುದಾಯದ ಬಹುಕಾಲದ ಕನಸು ಈ ದಿನಕ್ಕೆ ನಿಗದಿಯಾಗಿದ್ದು, ವಿವಿಧ ದಲಿತಪರ ಸಂಘಟನೆಗಳು ಮತ್ತು ಮುಖಂಡರು ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ನಡೆಸಿದ್ದಾರೆ.
ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ನಿರ್ದೇಶಕ ಸುರೇಶ ತಳವಾರ, ಈ ಕುರಿತು ಮಾಹಿತಿ ನೀಡಿದ ವೇಳೆ, “ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಅತ್ಯಂತ ಐತಿಹಾಸಿಕ ಕ್ಷಣವನ್ನಾಗಿ ಮಾಡಲು ಎಲ್ಲ ಮುಖಂಡರ ಸಹಕಾರದಿಂದ ತೀರ್ಮಾನಿಸಲಾಗಿದೆ” ಎಂದರು.
ಈ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ್ ಕತ್ತಿ, ಗೃಹ ಸಚಿವ ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಬೌದ್ಧ ಬಿಕ್ಕುಗಳಾದ ಭಂತೇಜಿ ಮತ್ತು ಮೈಸೂರು ಜ್ಞಾನಪ್ರಕಾಶ ಮಹಾಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ.
ಪೂರ್ವಭಾವಿ ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ, ದಿಲೀಪ ಹೊಸಮನಿ, ಶ್ರೀಕಾಂತ ತಳವಾರ, ಚಲವಾದಿ ಮಹಾಸಭೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ರಮೇಶ ಹುಂಜಿ, ಸದಾಶಿವ ಕಾಂಬಳೆ, ಬಾವುಸಾಬ ಪಾಂಡ್ರೆ, ರಾಜೇಂದ್ರ ಮೋಸಿ.ಅಕ್ಷಯ ವಿರಮುಖ, ಕೆ. ವೆಂಕಟೇಶ, ಅಣ್ಣಪ್ಪ ಖಾತೇದಾರ, ಶಂಕರ ತಿಪ್ಪನಾಯಕ, ಶಿವು ಕಣಗಲಿ, ಪ್ರಕಾಶ ಮೈಲಾಕೆ, ಕಾಶಪ್ಪ ಹರಿಜನ, ಶಿವು ಮಾಳಗೆ, ಶಾಂತಾ ಹೆಳವಿ, ಚಂದ್ರಶೇಖರ ಚಲವಾದಿ, ಪಾಂಡು ಹರಿಜನ, ರೋಹಿತ ತಳವಾರ, ವಿನೋದ ಮಾಳಗೆ, ಪಾಂಡುರಂಗ ಶಿಂಗೆ, ಮುತ್ತು ವಿಜಯನ್ನವರ, ಅಮರ ಶಿಂಗೆ, ಗೋಪಾಲ ಕಾಳೆ, ಬಾಳಾಸಾಹೇಬ ಕೋಳಿ, ಶಿವಾಜಿ ಬಾಳೆಶಗೋಳ, ಮಂಜು ಕಾಮತ, ಮುತ್ತು ಕಾಂಬಳೆ, ಸರೋಜಿನಿ ಕಾಂಬಳೆ.ಪ್ರಜ್ವಲ್ ದಾನಾಪ್ಪಗೋಳ. ಉಮೇಶ ಚಲವಾದಿ. ಶೇಷಾದ್ರಿ ಟೋಳಕೆ.ಕರ್ನಾಟಕ ಭೀಮ್ ಸೇನೆ ಬೆಳಗಾವಿ-ಧಾರವಾಡ-ಬಾಗಲಕೋಟೆ ವಿಭಾಗೀಯ ಜಿಲ್ಲಾಧ್ಯಕ್ಷ ಡಾ. ರವಿ ಬಿ. ಕಾಂಬಳೆ, ಮತ್ತು ಶಿವಾನಂದ ಮರಿನಾಯ್ಕ. ಮೊದಲಾದವರು ಉಪಸ್ಥಿತರಿದ್ದರು.
“ಅಂಬೇಡ್ಕರ್ ಪ್ರತಿಮೆ ಅನಾವರಣ, ದಲಿತ ಸಮುದಾಯದ ಗೌರವವನ್ನು ಮತ್ತಷ್ಟು ಹೆಚ್ಚಿಸುವ ಮಹತ್ವದ ಕ್ಷಣವಾಗಲಿದೆ,” ಎಂದು ಸಭೆಯ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.