ನೆರೆಯ ರಾಜ್ಯಗಳಲ್ಲಿ ನಮಗಿಂತ ಬಸ್ ಪ್ರಯಾಣ ದರ ಹೆಚ್ಚಿದೆ, ನಮ್ಮಲ್ಲಿ ದರ ಕಡಿಮೆ ಇದೆ; ಶಿವಾನಂದ ಪಾಟೀಲ್

ಹಾವೇರಿ: “ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಬಸ್ ಪ್ರಯಾಣ ದರ ನಮಗಿಂತ ದರ ಹೆಚ್ಚಿದೆ. ನಮ್ಮಲ್ಲಿ ಕಡಿಮೆ ಇದೆ” ಎಂದು ಬಸ್ ಟಿಕೆಟ್ ದರ ಏರಿಕೆಯನ್ನು ಸಚಿವ ಶಿವಾನಂದ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರಿಗೆ ಹೋರಾಟ ಮಾಡೋದು ಬಿಟ್ಟು ಬೇರೆ ಏನು ಕೆಲಸ ಹೇಳಿ?. ಅವರು ಒಂದು ಸಲವಾದರೂ ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾರಾ?. ಶಕ್ತಿ ಯೋಜನೆಯಲ್ಲಿ ಬಡ ಜನರನ್ನು ಓಡಾಡಿಸ್ತಿದ್ದೇವೆ ಅಂದರೆ ಅಟ್ ಲೀಸ್ಟ್ ನೋ ಪ್ರಾಫಿಟ್ ನೋ ಲಾಸ್ನಲ್ಲಿ ಆದರೂ ಉಳಿಸಬೇಕು ಎಂಬ ಉದ್ದೇಶ ಅಷ್ಟೇ” ಎನ್ನುವ ಮೂಲಕ ಬಸ್ ಟಿಕೆಟ್ ದರ ಹೆಚ್ಚಳವನ್ನು ಸಮರ್ಥಿಸಿಕೊಂಡರು.
“ಹೆಣ್ಣು ಮಕ್ಕಳಿಗೆ, ಬಡವರಿಗೆ ಏನ್ ಕೊಡಬೇಕೋ ಅದನ್ನು ಆದಷ್ಟು ಕೊಟ್ಟಿದ್ದೇವೆ. ದುಡಿಯುವ ಗಂಡುಮಕ್ಕಳಿಗೆ 15% ಬಸ್ ಪ್ರಯಾಣ ದರ ಏರಿಕೆ ಭಾರ ಆಗಬಹುದು. ನಾನು ಇಲ್ಲ ಅಂತ ಹೇಳಲ್ಲ. ಪ್ರತಿ ನಿತ್ಯ ಓಡಾಡುತ್ತಿರೋರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿದ್ದಾರೆ. ಗಂಡುಮಕ್ಕಳು ಓಡಾಡಲ್ಲ, ನೀವು ಉಲ್ಟಾ ಹೇಳುತ್ತಿದ್ದೀರಿ” ಎಂದು ಮಾಧ್ಯದಮವರಿಗೆ ಹೇಳಿದರು.