ಬೆಳಗಾವಿ

ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಸಲ್ಲದು. ಎಲ್ಲರೂ ಒಗ್ಗೂಡಿ ಮಾತ್ರ ಅಭಿವೃದ್ಧಿ ಸಾಧ್ಯ;ನಾನಾಸಾಹೇಬ ಪಾಟೀಲ

ಬೆಳಗಾವಿ: ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ ದೇಶ ಭಾರತ.‌ ಆದ್ದರಿಂದ ಗ್ರಾಮೀಣ ಪ್ರದೇಶಗಳು ಸಮಗ್ರವಾಗಿ ಅಭಿವೃದ್ಧಿ ಆದರೆ ಮಾತ್ರ ದೇಶ ಅಭಿವೃದ್ಧಿಯಾದಂತೆ ಎಂದು ಮರೀಕಟ್ಟಿ ಗ್ರಾಪಂ ಅಧ್ಯಕ್ಷ ವಿಠ್ಠಲ ತಳವಾರ ಅಭಿಪ್ರಾಯಪಟ್ಟರು.
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಸೋಮವಾರ‌‌ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ನಾನಾಸಾಹೇಬ ಪಾಟೀಲ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಸಲ್ಲದು. ಎಲ್ಲರೂ ಒಗ್ಗೂಡಿ ಮಾತ್ರ ಅಭಿವೃದ್ಧಿ ಸಾಧ್ಯ. ಅಲ್ಲದೇ ಕಿತ್ತೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹೋದರ ಹಾಗೂ ಶಾಸಕರಾಗಿರುವ ಬಾಬಾಸಾಹೇಬ ಪಾಟೀಲ ದೃಢ ಸಂಕಲ್ಪ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಬದಲ್ಲಿ ಗ್ರಾಪಂ ಸದಸ್ಯರಾದ ಶಿವಾನಂದ ಕಲ್ಲೂರ, ಮಹಾಂತೇಶ ಯರಗಣವಿ, ರವಿ ಕಲ್ಲೂರ, ದೀಪಾ ಮರೆಣ್ಣವರ, ಶಾಂತವ್ವ ಉಪ್ಪಾರಟ್ಟಿ, ಪಿಡಿಒ ಎನ್.ಕೆ.ಮಾಳಗಿ,
ಗ್ರಾಮದ ಮುಖಂಡರಾದ ಗೌಡಪ್ಪ ನಾವಲಗಟ್ಟಿ, ಯಲ್ಲಪ್ಪ ಕರಡಿಗುದ್ದಿ, ಕುಮಾರ ಬಾಂವಿ, ಸಿದ್ದಯ್ಯ ಹಿರೇಮಠ, ಶಂಕರ ಕಲ್ಲೂರ, ಯಲ್ಲಪ್ಪ ಉಪ್ಪಾರಟ್ಟಿ, ವೀರಭದ್ರಯ್ಯಾ ವಿರಕ್ತಮಠ, ಶಿವಾನಂದ ಬಸ್ಸಾಪೂರ, ಅರ್ಜುನ ಹುದಲಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button