ರಾಯಚೂರು
ಪರಿಮಳ ಗುರುಕುಲ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ

ಮುದಗಲ್ : ಮಕ್ಕಳಿಗಾಗಿ ಶಾಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಕಾರ್ಯಕ್ರಮ ಮಾಡುವುದರಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ ಎಂದು ಪರಿಮಳ ಗುರುಕುಲ ಶಾಲೆಯ ಆಡಳಿತಾಧಿಕಾರಿ ನಾರಾಯಣರಾವ್ ದೇಶಪಾಂಡೆ ಹೇಳಿದರು.
ಪಟ್ಟಣದ ಪರಿಮಳ ಗುರುಕುಲ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ೭ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಬೇಕಾದರೆ ಪಾಠದ ಜೊತೆಗೆ ಆಟವು ಅಗತ್ಯವಾಗಿದೆ.ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಗುರುತಿಸುವ ಕೌಶಲ್ಯ ಚಟುವಟಿಕೆಗಳಿಂದ ಮೂಡುತ್ತಿದೆ.ಪಠ್ಯೆತರ ಚಟುವಟಿಕೆಗಳಿಂದ ಕ್ರೀಡಾ ಮನೋಭಾವ ಮತ್ತು ವಿಶ್ಲೇಷಣಾತ್ಮಕ ಚಿಂತನೆಗಳು ಮಕ್ಕಳಲ್ಲಿ ವೃದ್ದಿಯಾಗುತ್ತದೆ ಎಂದರು.ನAತರ ಮಕ್ಕಳಿಂದ ಸಾಂಸ್ಕೃತೀಕ ಕಾರ್ಯಕ್ರಮಗಳು ಜರುಗಿದವು.
ಈ ವೇಳೆ ಉಪೇಂದ್ರ ದೇಶಪಾಂಡೆ ವೆಂಕಟೇಶ ಕುಲ್ಕರ್ಣಿ,ಪ್ರಾಣೇಶ ಮುತಾಲಿಕ್,ಸೇರಿದಂತೆ ಇತರರು ಇದ್ದರು.