Uncategorized

ಕಾಂಗ್ರೆಸ್​ ಕೇವಲ “ಬೆಂಕಿ‌” ಹಚ್ಚುವ ಕೆಲಸ ಮಾಡುತ್ತೆ; ಶೆಟ್ಟರ್​ 

ಬಿಜೆಪಿ‌ ಆಂತರಿಕ ಒಳಜಗಳ‌ ವಿಚಾರಕ್ಕೆ ಸಂಬಂಧಿಸಿದಂತೆ ‌ಪ್ರತಿಕ್ರಿಯೆ ನೀಡಿದ ಅವರು, “ಪಕ್ಷದಲ್ಲಿ‌ ಎಲ್ಲವೂ ಒಂದು‌ ಹಂತಕ್ಕೆ ಬಂದಿದೆ. ವರಿಷ್ಠರು‌ ಎಲ್ಲವನ್ನೂ ಸರಿಪಡಿಸಲಿದ್ದಾರೆ. ಪಕ್ಷ ಬಹುದೊಡ್ಡದಾಗಿ ಬೆಳೆದಾಗ ಆಂತರಿಕ‌ ವೈಮನಸ್ಸು ಸಹಜ. ಶೀಘ್ರವೇ ಎಲ್ಲವೂ ಸರಿಹೋಗುತ್ತೆ. ಬಣ ರಾಜಕೀಯಕ್ಕೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತಿಲಾಂಜಲಿ‌ ಹಾಡಲಿದ್ದಾರೆ” ಎಂದು ತಿಳಿಸಿದರು.

ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಈ‌ ವಿಚಾರವಾಗಿ‌ ಕಾಂಗ್ರೆಸ್​ಗೆ ಹೋಗಲ್ಲ ಅಂತಾ ಶ್ರೀರಾಮುಲು ಈಗಾಗಲೇ ಹೇಳಿದ್ದಾರೆ. ಆದ್ರೂ ಸಹ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ ಅನ್ನೋ ಕಾಂಗ್ರೆಸ್ ನವರದ್ದು ಬೆಂಕಿ‌ ಹಚ್ಚುವ ಕೆಲಸ. ಕಾಂಗ್ರೆಸ್​ ಕೇವಲ ಬೆಂಕಿ‌ ಹಚ್ಚುವ ಕೆಲಸ ಮಾಡುತ್ತೆ” ಎಂದು ಟೀಕಿಸಿದರು.

“ರಾಜ್ಯದಲ್ಲಿ ಮೈಕ್ರೋ‌ಫೈನಾನ್ಸ್​ ಹಾವಳಿ ಹೆಚ್ಚಾಗಿದೆ. ಬಡ ಮತ್ತು ಮಧ್ಯಮ‌ ವರ್ಗದ ಜನರು ತುರ್ತು ಸಂದರ್ಭದಲ್ಲಿ ಸಾಲ ತೆಗೆದುಕೊಂಡಿರುತ್ತಾರೆ.
ಮೈಕ್ರೋ‌ಫೈನಾನ್ಸ್​ನಿಂದ ಜನಸಾಮಾನ್ಯರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ನಿನ್ನೆ ಸಿಎಂ‌ ಸಿದ್ದರಾಮಯ್ಯ ಕಠಿಣ ಕಾನೂನು‌ಕ್ರಮ‌ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದ್ದ ಕಾನೂನಿನಲ್ಲೇ ಕ್ರಮ‌ಕೈಗೊಳ್ಳಬಹುದಿತ್ತು. ಹೊಸ ಕಾನೂನು‌ ತರುವ ಅವಶ್ಯಕತೆಯೇ ಇಲ್ಲ‌. ಸಿಎಂ‌ ಸುಮ್ಮನೇ ತೋರಿಕೆಗೆ ಸಭೆ ನಡೆಸಿ‌ದ್ದಾರೆ. ಈ‌ ರೀತಿ ತೋರಿಕೆಗೆ ಸಭೆ ನಡೆಸಿ ಕ್ರಮ‌ಕೈಗೊಳ್ಳುವ ಭರವಸೆ ನೀಡುವುದು ಸಮಂಜಸವಲ್ಲ. ಈಗಾಗಲೇ‌ ಇರುವಂತಹ ಕಾನೂನಿನಲ್ಲಿ‌ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ನೀಡುವ ಕೆಲಸಗಳಾಗಬೇಕು” ಶೆಟ್ಟರ್​ ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button