ಬೆಳಗಾವಿ

ಬೆಳಗಾವಿಯಲ್ಲಿ ಚಿತ್ರಕಲಾಕೃತಿಗಳ ಪ್ರದರ್ಶನ;ಗುಲಮೋಹರ್ ಬಾಗನಿಂದ ಆಯೋಜನೆ.

ಬೆಳಗಾವಿ:  ಗುಲಮೋಹರ್ ಬಾಗನ ವತಿಯಿಂದ 20ನೇ ಚಿತ್ರಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಫೋರ್ಥ ಸ್ಕ್ವೇರ್ಸಗೆ ಚಾಲನೆ ದೊರೆತಿದೆ. 5 ದಿನಗಳ ಕಾಲ ನಡೆಯುವ ಈ ಪ್ರದರ್ಶನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನವರಿ 26 ಗಣರಾಜ್ಯೋತ್ಸವದ ದಿನದಂದು ಬೆಳಗಾವಿಯ ಟಿಳಕವಾಡಿಯಲ್ಲಿರುವ ವರೇರಕರ ನಾಟ್ಯಗೃಹದಲ್ಲಿ ಗುಲಮೋಹರ್ ಬಾಗನ ವತಿಯಿಂದ 20ನೇ ಚಿತ್ರಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಫೋರ್ಥ ಸ್ಕ್ವೇರ್ಸ ಆರಂಭಗೊಂಡಿದ್ದು, ಕ್ಯಾಪ್ಟನ್ ಧೋಂಡ್, ಕಲಾವಿದರಾದ ವಿಕ್ರಾಂತ ಶಿತೋಳೆ ಮತ್ತು ದಿನೇಶ್ ರೇವಣಕರ ಅವರು ಪ್ರದರ್ಶನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆಯನ್ನು ನೀಡಿದರು.

ಈ ಪ್ರದರ್ಶನದಲ್ಲಿ ಭಾರತೀಯ ಜಾನಪದ ಸಂಸ್ಕೃತಿಯ ದರ್ಶನವಾಗುತ್ತದೆ. 800 ವರ್ಷ ಹಳೆಯದಾಗ ಗುಜರಾತಿನ ನವದುರ್ಗೆಯರ ಮಾತಾನಿ ಪಚೇಡಿ ಕಲಾಕೃತಿಗಳು ಪ್ರೇಕ್ಷಕರ ಮನಸೂರೆಗೊಂಡವು. ಪೇಪರ ವರ್ಕ್ ಮತ್ತು ಅಕ್ರಾಲಿಕ್ ಬಣ್ಣದ ಮೂಲಕ ಈ ಕಲಾಕೃತಿಗಳನ್ನು ತಯಾರಿಸಲಾಗಿದೆ. ಜನರು ಹೆಚ್ಚೆಚ್ಚಾಗಿ ಈ ಪ್ರದರ್ಶನಕ್ಕೆ ಬಂದು ಕಲಾವಿದರ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಕಲಾವಿದೆ ಸುಲಕ್ಷಣಾ ಅಡಕೆ ಕರೆ ನೀಡಿದರು.

ಇನ್ನು ಶಿಲ್ಪಾ ಖಡಕಭಾಂವಿ ಅವರು ಪ್ರದರ್ಶನ ಮತ್ತು ಮಾರಾಟದ ಕುರಿತು ಮಾಹಿತಿಯನ್ನು ನೀಡಿದರು. ವಿವಿಧ ಬಗೆಯ ಕಲಾಕೃತಿಗಳನ್ನು ಈ ಬಾರಿಯ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಅಲ್ಲದೇ ಪೋಟ್ರೆಟ್ ಕಲಾಕೃತಿಗಳನ್ನು ಕೂಡ ಇಲ್ಲಿ ತಯಾರಿಸಲಾಗುತ್ತಿದೆ ಎಂದರು.

ರೇಜಿನ್ ಆರ್ಟನಲ್ಲಿ ಸೀ ವ್ಯೂವ್ ಕಲಾಕೃತಿ ತಯಾರಿಸಿದ ಸ್ನೇಹಾ ಕಂಗ್ರಾಳಕರ ಅವರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿದರು.

ಜನವರಿ 26 ಗಣರಾಜ್ಯೋತ್ಸದ ದಿನದಿಂದ ಜನವರಿ 30 ರ ವರೆಗೆ ಈ ಪ್ರದರ್ಶನ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆಯ ವರೆಗೆ ಈ ಪ್ರದರ್ಶನ ಪ್ರೇಕ್ಷಕರಿಗೆ ತೆರೆದಿರಲಿದೆ.

 

Related Articles

Leave a Reply

Your email address will not be published. Required fields are marked *

Back to top button