ಅಥಣಿ
ಕೇಂದ್ರದ ಬಜೆಟ್ ಬಗ್ಗೆ ನಮಗೆ ಯಾವುದೆ ನಿರೀಕ್ಷೆ ಇಲ್ಲ; ಅವರು ಘೋಷಿಸಿದ ಹಣ ನಮಗೆ ಬಂದು ತಲುಪಲ್ಲ:ಲಕ್ಷ್ಮಣ ಸವದಿ

ಕೇಂದ್ರದ ಬಜೆಟ್ ಬಗ್ಗೆ ನಮಗೆ ಯಾವುದೆ ನಿರೀಕ್ಷೆ ಇಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಅವರು ಅಥಣಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತ ಕೇಂದ್ರದ ಬಜೆಟ್ ಬಗ್ಗೆ ನಮಗೆ ಯಾವುದೆ ಅಪೇಕ್ಷೆ ಇಲ್ಲ ಕಾರಣ ಅವರು ಘೋಷಣೆ ಮಾಡಿದ ಹಣ ನಮಗೆ ಬಂದು ತಲುಪಿಲ್ಲ ಉದಾಹರಣೆ ಭದ್ರ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ 5600 ಕೋಟಿ ರೂ ಹಣ ಬಿಡುಗಡೆಯಾಗಿಲ್ಲ ಆದ ಕಾರಣದಿಂದ ನಮಗೆ ಕೇಂದ್ರದ ಬಜೆಟ್ ಬಗ್ಗೆ ಯಾವುದೆ ನಿರೀಕ್ಷೆ ಇಲ್ಲ ಎಂದು ಹೇಳಿದರು.