ಶಾಸಕ ಜನಾರ್ದನರೆಡ್ಡಿ ವಿರುದ್ಧ ಕಾನೂನು ಹೋರಾಟ – ಮೌನೇಶ ನಾಯಕ

ಮುದಗಲ್ : ಮಾಜಿ ಸಚಿವ ಶ್ರೀರಾಮಲು ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನರೆಡ್ಡಿ ರವರು ಕೂಡಲೇ ಕ್ಷೇಮೆ ಕೇಳಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡಲಾಗುವದು ಎಂದು ಅವರ ಅಭಿಮಾನಿ ಮೌನೇಶ ನಾಯಕ ವ್ಯಾಸನಂದಿಹಾಳ ಎಚ್ಚರಿಕೆ ನೀಡಿದರು
ಬುಧುವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಬುಧುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಾಲ್ಮೀಕಿ ನಾಯಕ ಸಮಾಜವು ರಾಜ್ಯದಲ್ಲಿ ಮೂರನೆ ದೊಡ್ಡ ಸಮಾಜವಾಗಿದೆ.ಸಮಾಜದ ದೊಡ್ಡ ನಾಯಕರಾದ ಶ್ರೀರಾಮುಲು ಬಗ್ಗೆ ಕೀಳು ಜಾತಿಯವನು ಕೊಡಲಿ ಹಿಡಿದುಕೊಂಡು ಬೀದಿಯಲ್ಲಿ ಓಡಾತ್ತಿದ್ದ ಎಂದು ಹೇಳಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ.ಗಂಗಾವತಿ ವಿಧಾನಸಭಾ ಚುನಾವಣೆಯಲ್ಲಿ ಸಮಾಜ ಬೆಂಬಲಿಸಿ ನಿಮ್ಮ ಗೆಲುವಿಗೆ ಪ್ರಮುಖ ಪಾತ್ರವಹಿಸಿರುವುದು ಮರೆತಿದ್ದು, ಸಂಡೂರು ಉಪಚುನಾವಣೆ ಸೋಲಿನ ಹೋಣೆಯನ್ನು ಅವರ ಮೇಲೆ ಹೇಳಿರುವುದು ಸರಿಯಲ್ಲ.
೩ ಕ್ಷೇತ್ರಗಳ ಉಪಚುನಾವಣೆಯ ಸೋಲಿನ ಹೊಣೆಯನ್ನು ರಾಜ್ಯಾಧ್ಯಕ್ಷರು,ರಾಜ್ಯ ಉಸ್ತುವಾರಿಗಳು ಹೊಣೆಹೊರಬೇಕು.ಬಿಜೆಪಿ ಪಕ್ಷದಿಂದ ಶ್ರಿರಾಮುಲು ರವರಿಗೆ ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದವರು ಮಾಡದೇ ಅನ್ಯಾಯ ಮಾಡಿದ್ದಾರೆ.ಮತ್ತು ಇದೇ ರೀತಿ ಶಾಸಕ ಜನಾರ್ದನರೆಡ್ಡಿ ರವರು ಶ್ರಿರಾಮುಲು ರವರ ವಿರುದ್ದ ಹೇಳಿಕೆಗಳನ್ನು ನೀಡುತ್ತಾ ಹೋದರೆ ಕಾನೂನು ಹೋರಾಟ ಮಾಡಲಾಗುವುದು ಎಂದರು.ಕೂಡಲೇ ಮುಂದಿನ ದಿನಗಳಲ್ಲಿ ಶ್ರೀರಾಮುಲು ರವರನ್ನು ರಾಜ್ಯಾಧ್ಯಕ್ಷರನ್ನಬಾಗಿ ಮಾಡಬೇಕು.ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಕೇಂದ್ರ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ಈ ವೇಳೆ ನಾಗರಾಜ ನಾಯಕ ವ್ಯಾಸನಂದಿಹಾಳ, ಅರುಣ ಮುದಗಲ್, ನೇತಾಜಿ ನಾಯ್ಕ್ ಇದ್ದರು.