Uncategorized
ಜಾಗತಿಕ ತಾಪಮಾನ ಏರಿಕೆ ತಗ್ಗಿಸಲು ಗಿಡ ನೆಟ್ಟು ಬೆಳೆಸುವುದೇ ಮಾರ್ಗ: ಈಶ್ವರ ಖಂಡ್ರೆ

ಬೆಂಗಳೂರು : ಜಾಗತಿಕ ತಾಪಮಾನ ಏರಿಕೆಗೆ ಗಿಡ ನೆಟ್ಟು ಬೆಳೆಸುವುದೇ ಮಾರ್ಗ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಪೀಪಲ್ಸ್ ಪ್ಲಾನೆಟ್ ಆರಂಭಿಸಿರುವ ‘ನಮ್ಮ ಮರ ನಮ್ಮ ಬೆಂಗಳೂರು’ ಅಭಿಯಾನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ರಾಜಭವನದ ಅಂಗಳದಲ್ಲಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಂದು ವಿಶ್ವದ ಮುಂದಿರುವ ಸವಾಲಾಗಿದ್ದು, ಹಸಿರು ಹೊದಿಕೆ ಹೆಚ್ಚಳವೇ ಇದಕ್ಕೆ ಪರಿಹಾರ ಎಂದರು.
ಪೀಪಲ್ಸ್ ಪ್ಲಾನೆಟ್ ಬೆಂಗಳೂರಿನಲ್ಲಿ 10 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸುವ ಉದ್ದೇಶವನ್ನು ಹೊಂದಿದೆ.