ಬಿಎ ಪದವಿ ಪುಸ್ತಕದಲ್ಲಿನ ಪಠ್ಯ ಕೈಬಿಟ್ಟರಷ್ಟೇ ಸಾಲದು, ಆ ಲೇಖಕನಿಗೆ ಗುಂಡು ಹೊಡೆಯಬೇಕು; ಪ್ರಮೋದ್ ಮುತಾಲಿಕ್

ಧಾರವಾಡ,: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಬಿಎ ಪದವಿ ಪುಸ್ತಕದಲ್ಲಿನ ಪಠ್ಯ ಕೈಬಿಟ್ಟರಷ್ಟೇ ಸಾಲದು, ಸಂಬಂಧಿಸಿದವರ ಮೇಲೆ ಕ್ರಮ ಆಗಬೇಕು. ಆ ಲೇಖಕನಿಗೆ ಗುಂಡು ಹೊಡೆಯಬೇಕು.
ಭಾರತ ಮಾತೆಯ ಬಗ್ಗೆ ಅಪಮಾನ ಮಾಡಿದವರಿಗೆ ಕ್ಷಮೆ ಇಲ್ಲ. ಅಕ್ಷಮ್ಯ ಅಪರಾಧ ಆಗಿದೆ. ಹೀಗಾಗಿ ಕ್ರಮ ಆಗಲೇಬೇಕು. ಇಲ್ಲದೇ ಹೋದಲ್ಲಿ ಹೋರಾಟ ಮುಂದುವರೆಯುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದ್ದಾರೆ.
ಕವಿವಿಯಲ್ಲಿ ನಡೆದ ಪುಷ್ಪ ನಮನ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು, ಕವಿವಿಯಲ್ಲಿ ಅತ್ಯಂತ ಅವಮಾನಕರ ಘಟನೆ ಆಗಿದೆ. ಇದೊಂದು ಕಳಂಕದ ರೀತಿಯ ಘಟನೆ. ಬೆಳಗು-1 ರ ಪಠ್ಯ ವಿವಾದ ಆಗಿದೆ. ಭಾರತ ಮಾತಾ ಕೀ ಜೈ ಶಬ್ದಕ್ಕೆ ಅಪನಂಬಿಕೆ ಮೂಡಿಸುವ ಪಾಠ ಹಾಕಿದ್ದಾರೆ. ನಾನು ಈ ಸಂಬಂಧ ವಿಸಿ ಅವರಿಗೂ ಮನವಿ ಕೊಟ್ಟಿದ್ದೇನೆ ಎಂದಿದ್ದಾರೆ.
ಪಾಠಗಳನ್ನು ನಾಲ್ಕು ಜನ ಪರಿಷ್ಕರಣೆ ಮಾಡುತ್ತಾರಂತೆ. ಸಂಪಾದಕೀಯ ಮಂಡಳಿ ಇದೆ. ಆ ನಾಲ್ಕು ಜನರ ಕಣ್ಣಿಗೆ ಇದು ಗೊತ್ತಾಗಲಿಲ್ಲವಾ? ಈ ರೀತಿಯ ಅಪಚಾರ ಮಹಾಅಪರಾಧ. ಇದು ದೇಶದ್ರೋಹಕ್ಕೆ ಸಮಾನವಾಗಿರೋದು. ಇದು ತುಕಡೆ ಗ್ಯಾಂಗ್ನ ಕೆಲಸ. ಎಲ್ಲ ವಿವಿಗಳಲ್ಲಿ ತುಕಡೆ ಗ್ಯಾಂಗ್ನವರು ಇದ್ದಾರೆ. ಎಲ್ಲ ಕಡೆ ಈ ರೀತಿಯ ವಿಕೃತವಾದಿಗಳು ಇದ್ದಾರೆ. ಅಂತಹ ಒಬ್ಬ ಮಾತ್ರವಲ್ಲ, ಒಂದು ತಂಡ ಕವಿವಿದಲ್ಲಿಯೂ ಇದೆ. ಇವರದ್ದು ಚೀನಾ ಡಿಎನ್‌ಎ. ಇವರ ಮಾನಸಿಕತೆ ಕಂಡು ಹಿಡಿಯಬೇಕು ಎಂದು ಕಿಡಿಕಾರಿದ್ದಾರೆ.