ಬೆಂಗಳೂರು
ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಮೇಲೆ ನಮಗೆ ವಿಶ್ವಾಸವಿಲ್ಲ;ಡಿ.ಕೆ. ಶಿವಕುಮಾರ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ತಾವು ಯಾವುದೇ ಎಕ್ಸಿಟ್ ಪೋಲ್ ಮೇಲೆ ವಿಶ್ವಾಸ ಇರಿಸಲ್ಲ ಎಂದರು. ಮತದಾರರ ತಿರ್ಮಾಣವನ್ನು ಕಾಯೋಣ. ಶೀಘ್ರದಲ್ಲೇ ಫೈನಾನ್ಸಗಳ ಕಿರುಕುಳ ತಪ್ಪಿಸಲು ಹೊಸ ವಿಧೇಯಕವನ್ನು ಜಾರಿಗೊಳಿಸಲು ಮುಖ್ಯಮಂತ್ರಿಗಳು ರಾಜ್ಯಪಾಲರ ಬಳಿ ಕಳುಹಿಸಲಿದ್ದಾರೆ ಎಂದರು.
ಬಂಧಿಸಿದಂತೆ ಕಾಂಗ್ರೆಸ್ ಯುವ ಅಧ್ಯಕ್ಷ ಮೊಹ್ಮದ್ ನಲಪಾಡಗೆ ನೋಟಿಸ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ತನಿಖಾ ತಂಡದವರು ತನಿಖೆ ಮಾಡಲಿದ್ದಾರೆ ಎಂದರು.
ಏರ್ ಪೋರ್ಟ್ ನಿರ್ಮಾನಕ್ಕೆ ಸಂಬಂಧಿಸಿದಂತೆ ಟೀಕೆ ಮಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗಳ ಹೇಳಿಗೆ ತಿರುಗೇಟು ನೀಡಿದ ಅವರು ಅವರ ಕಾಲದಲ್ಲಿ ಕೆಲಸವಾಗಲಿಲ್ಲ. ಈಗ ನಾವು ಮಾಡುತ್ತಿದ್ದೇವೆ. ಕಾವೇರಿ ಮೇಕೆದಾಟು ಯೋಜನೆಗೆ ಒಂದೇ ದಿನದಲ್ಲಿ ಪಿಎಂ ಮೋದಿ ಅನುಮತಿ ಕೊಡಿಸುವ ಕೆಲಸವನ್ನು ಮೊದಲೂ ಮಾಡಲಿ ಎಂದರು.