ಕಿತ್ತೂರು ತಹಸಿಲ್ದಾರ್ ಕಚೇರಿ ಎದುರು ಸತತ 25 ದಿನಗಳಿಂದ ರೈತರು ನಿರಂತರ ಹೋರಾಟ

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ತಹಶೀಲ್ದಾರ್ ಕಚೇರಿ ಎದುರುಗಡೆ ಕಳೆದ 25 ದಿನಗಳಿಂದ ನಿರಂತರವಾಗಿ ರೈತರು ತಮ್ಮ ಜಮೀನಗಾಗಿ ಹೋರಾಟ ನಡೆಸುತ್ತಿದ್ದು ಈ ಹೋರಾಟ ಯಾವ ಸ್ವರೂಪ ತಾಳಲಿದೆ ಕಾದು ನೋಡಬೇಕಾಗಿದೆ
ಕುಳ್ಳೋಳಿಗೆ ಸಂಬಂಧಪಟ್ಟಂತ ಒಂಬತ್ತು ಹಳ್ಳಿಗಳ ರೈತರು ತಮ್ಮ ಜಮೀನನ್ನು ಪಡೆದೆ ತೀರುತ್ತೇವೆ ಎಂದು ತಹಸಿಲ್ದಾರ್ ಕಚೇರಿ ಎದುರುಗಡೆ ಹೋರಾಟ ನಡೆಸುತ್ತಿದ್ದಾರೆ.ಈ ರೈತರ ಹೋರಾಟಕ್ಕೆ ಕಾರಣ ಏನಿದೆ ಎಂಬುದನ್ನು ರೈತ ಹೋರಾಟಗಾರ್ತಿ ವಿವರಣೆ ನೀಡಿದ್ದಾರೆ
ಇದೆ ಸಂದರ್ಭದಲ್ಲಿ ಮಾತನಾಡಿದ ರೈತ ಹೋರಾಟಗಾರ್ತಿ ನಾಗರತ್ನ ಪಾಟೀಲ ನಮ್ಮ ಅಜ್ಜ ಅಜ್ಜಿಯರ ಕಾಲದಿಂದಲೂ ಕೂಡ ನಮ್ಮ ಜಮೀನಿನ RTC ರೈತರ ಕಾಲದಲ್ಲಿ ಹೆಸರು ಸೇರಿಸಬೇಕು
ಈ ಕುಳುಳ್ಳಿಗೆ ಸಂಬಂಧಪಟ್ಟಂತ ಒಂಬತ್ತು ಹಳ್ಳಿಗಳ ಜಮೀನಿನ ಬಗ್ಗೆ ಹೋರಾಟ ಮಾಡುತ್ತಿರುವಂತ ರೈತರನ್ನು ಹತ್ತಿಕ್ಕಲು ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂದು ರೈತ ಹೋರಾಟಗಾರ್ತಿ ತಿಳಿಸಿದ್ದಾರೆ ಕಿತ್ತೂರಿನ ಶಾಸಕರು ಮನಸ್ಸು ಮಾಡಿದರೆ ನಮ್ಮ ಜಮೀನು ನಮಗೆ ಸಿಗುತ್ತದೆ ನಮ್ಮ ಭೂಮಿ ನಮಗೆ ಬಿಟ್ಟು ಕೊಡಿ ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ,ನಮಗೆ ಜಯ ಸಿಗುವವರೆಗೂ 9 ಹಳ್ಳಿಗಳ ರೈತರು ಯಾವುದೇ ಕಾರಣಕ್ಕೂ ಈ ಹೋರಾಟವನ್ನು ನಿಲ್ಲಿಸುವುದಿಲ್ಲ