
ಕಣಬರ್ಗಿ ಶ್ರೀ ಸಿದ್ಧೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿ; ಮಹಾಪ್ರಸಾದ
ಬೆಳಗಾವಿಯ ಕಣಬರ್ಗಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಶಿವರಾತ್ರಿಯ ದಿನ ಅಭಿಷೇಕ, ಯಜ್ಞ, ಅಲಂಕಾರ, ಮಹಾಆರತಿ ಇನ್ನುಳಿದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇನ್ನು ಎರಡನೇಯ ದಿನ ಮಹಾಪ್ರಸಾದ ಸೇರಿದಂತೆ ಇನ್ನುಳಿದ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಶ್ರೀ ಸಿದ್ಧೇಶ್ವರನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
ಕಣಬರ್ಗಿಯ ಶ್ರಿ ಸಿದ್ಧೇಶ್ವರ ಮಂದಿರವು ಬೆಳಗಾವಿಯ ಅತ್ಯಂತ ಪ್ರಾಚೀನ ಕಾಲದ ದೇವಸ್ಥಾನವಾಗಿದೆ. ಪ್ರತಿ ಸೋಮವಾರ, ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಗೋವಾರಾಜ್ಯದಿಂದ ಆಗಮಿಸಿ ಶ್ರೀ ಸಿದ್ಧೇಶ್ವರರ ದರ್ಶನ ಪಡೆಯುತ್ತಾರೆ. ಇಲ್ಲಿ ನಡೆಯುವ ಎಲ್ಲ ಉತ್ಸವಗಳಲ್ಲಿ ಭಕ್ತರಿಗೆ ಯಾವುದೇ ತೊಂದರೆಗಳಾಗದಂತೆ ಶ್ರೀ ಸಿದ್ಧೇಶ್ವರ ಮಂದಿರ ಕಮೀಟಿಯೂ ಒಳ್ಳೆಯ ವ್ಯವಸ್ಥೆಯನ್ನು ಒದಗಿಸಿದೆ.