ಖಾನಾಪುರದಲ್ಲಿ ಮರಾಠಾ ಮಂಡಲ ಶಿಕ್ಷಣ ಸಂಸ್ಥೆಯ ಕ್ರೀಡಾ ಟ್ರ್ಯಾಕ್ ಉದ್ಘಾಟನೆ…

ಬೆಳಗಾವಿ : ತಾಲೂಕಿನ ಖಾನಾಪೂರದಲ್ಲಿ ಮರಾಠಾ ಮಂಡಲ ಶಿಕ್ಷಣ ಸಂಸ್ಥೆ ಮತ್ತು ಸಾಯಿ ಕ್ರೀಡಾ ಅಕಾಡೆಮಿಯ ವತಿಯಿಂದ ನಿರ್ಮಿಸಲಾದ ಕ್ರೀಡಾ ಟ್ರ್ಯಾಕನ್ನು ಉದ್ಘಾಟಿಸಲಾಯಿತು.
ಬೆಳಗಾವಿಯ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಮರಾಠಾ ಮಂಡಲ್ ಖಾನಾಪುರ ತಾಲೂಕು ಮತ್ತು ಸಾಯಿ ಸ್ಪೋರ್ಟ್ಸ್ನ ವತಿಯಿಂದ ಸ್ಕೇಟಿಂಗ್ ರಿಂಕ್, ಕ್ರಿಕೆಟ್ ಫುಟ್ಬಾಲ್ ಟರ್ಫ್ ಮೈದಾನ, ಟೇಬಲ್ ಟೆನ್ನಿಸ್, ಖೋ ಖೋ ಮತ್ತು ಕಬಡ್ಡಿ ಮುಂತಾದ ವಿವಿಧ ಮೈದಾನಗಳನ್ನು ನಿರ್ಮಿಸಲಾಗಿದ್ದು, ಇಂದು ಖಾನಾಪೂರದ ಶಾಸಕ ವಿಠ್ಠಲ ಹಲಗೇಕರ ಅವರು ಮೈದಾನದ ಉದ್ಘಾಟನೆಯನ್ನು ನೆರವೇರಿಸಿದರು.
ಮರಾಠಾ ಮಂಡಲ ಅಧ್ಯಕ್ಷೆ ರಾಜಶ್ರೀ ನಾಗರಾಜು ಅವರ ಮಾರ್ಗದರ್ಶನದಲ್ಲಿ, ಖಾನಾಪುರ ತಾಲೂಕಿನ ಕ್ರೀಡಾಳುಗಳಿಗೆ ಅನುಕೂಲವಾಗುವಂತೆ ಈ ಮೈದಾನಗಳನ್ನು ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ, ಮರಾಠಾ ಮಂಡಲದ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ನಾಗರಾಜು, ಸುಧೀರ್ ಹಲಗೇಕರ, ಸಂಯೋಗಿತಾ ಹಲಗೇಕರ, ಯುವ ಮುಖಂಡರಾದ ಜಯರಾಜ್ ಹಲಗೇಕರ, ಜಯವಂತ್ ಜಾಧವ್, ಸಂದೀಪ್ ಜಾಧವ್, ಸಾಯಿ ಕ್ರೀಡಾ ನಿರ್ದೇಶಕ ಪ್ರಸಾದ್ ಜಾಧವ್, ರಾಜಲಕ್ಷ್ಮಿ ಜಾಧವ್, ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ್ ಹಿಂಡಲಗೇಕರ್ ಮತ್ತು ಇತರರು ಉಪಸ್ಥಿತರಿದ್ದರು.