ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಡಳಿತ ಮಾಡುವವರ ಜೇಬು ತುಂಬಿತ್ತು : ಬಸವರಾಜ ಬೊಮ್ಮಾಯಿ ಆರೋಪ.

ಬೆಂಗಳೂರು: ವಿಕಸಿತ ಭಾರತ ಜನಸಾಮಾನ್ಯರ ಜೇಬು ಖಾಲಿ ಆಗಿದೆ ಅಂತಾ ಮಲ್ಲಿಕಾರ್ಜುನ ಖರ್ಗೆ ಆರೋಪ ಹಿನ್ನಲೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಡಳಿತ ಮಾಡುವವರ ಜೇಬು ತುಂಬಿತ್ತು ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು. ಯಾವುದಾದರೂ ರಾಜ್ಯ ವಿಕಸಿತ ಆದರೆ ಜನರು ವಿಕಸಿತ ಆದಂತೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಡಳಿತ ಮಾಡುವವರ ಜೇಬು ತುಂಬಿತ್ತು. ಜನಸಾಮಾನ್ಯರ ಜೇಬು ಖಾಲಿ ಆಗಿತ್ತು ಎಂದರು.
ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ 25 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗ ಅತ್ಯಂತ ಕಡಿಮೆ ಜನರು ಆದಾಯ ತೆರಿಗೆ ಪಾವತಿ ಮಾಡುತಿದ್ದರು ಎಂದರು. ನಾಲ್ಕು ಲಕ್ಷ ಜನರು ಈಗ ಆದಾಯ ತೆರಿಗೆ ಪಾವತಿ ಮಾಡತಾ ಇದ್ದಾರೆ. ಭಾರತ ವಿಕಸಿತ ಆಗುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಅನಿಸಿತಾ ಇದೆ.ಹೊರಗಿನವರಿಗೂ ಅನಿಸತಾ ಇದೆ. ಶೇಕಡಾ 6.5 ಅಭಿವೃದ್ಧಿ ಆಗುತ್ತಿರುವುದು..
ಕಾಂಗ್ರೆಸ್ ಹಾಗೂ ಅವರ ಅಧ್ಯಕ್ಷರಿಗೆ ಕಾಂಗ್ರೆಸ್ ಅಭಿವೃದ್ಧಿ ಆದರೆ ಮಾತ್ರ ದೇಶ ಅಭಿವೃದ್ಧಿ ಆದಂತೆ ಅನಸತ್ತಾ ಇದೆ ಎಂದರು. ಬಡವರು, ದೀನ ದಲಿತರು, ರೈತರು, ಬಡ ಹೆಣ್ಣು ಮಕ್ಕಳು ಎಲ್ಲ ರಂಗದಲ್ಲಿ ಮುಂದೆ ಬರತಾ ಇದ್ದಾರೆ. ಅಭಿವೃದ್ಧಿ ಆಗತಾ ಇದೆ. ವಿಕಸಿತ ಭಾರತ ಕಲ್ಪನೆ ಇಂದು ಯಶಸ್ವಿಯಾಗಿದೆ ಆಗಿದೆ. ಇದೊಂದು ಸಹಕಾರಗೊಳ್ಳತಾ ಇದೆ.ಎಲ್ಲರೂ ಕೂಡ ಇದಕ್ಕೆ ಕೈ ಜೋಡಸತಾ ಇದ್ದಾರೆ. ಇದನ್ನ ಕಾಂಗ್ರೆಸ್ ನವರು ಸಹಿಸಲು ಆಗತಾ ಇಲ್ಲ ಎಂದರು.