ಬಾಗಲಕೋಟೆ

ಸರ್ಕಾರ SCSP ಮತ್ತು TSP ಹಣ ದುರ್ಬಳಕೆ ಖಂಡಿಸಿ ಬಿಜೆಪಿ ಪ್ರತಿಭಟನೆ…

ಬಾಗಲಕೋಟೆ : ರಾಜ್ಯ ಸರ್ಕಾರ ಎಸ್ಸಿಎಸ್‌ಪಿ ಮತ್ತು ಟಿ ಎಸ್ ಪಿ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನವನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಡಿಸಿ ಕಚೇರಿ ವರೆಗೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಲಾಯಿತು. ಸರ್ಕಾರ ಗ್ಯಾರೆಂಟಿ ಹೆಸರಲ್ಲಿ ದಲಿತರಿಗೆ ಮೋಸ ಮಾಡುತ್ತಿದೆ

2023-24 ರಲ್ಲಿ ದಲಿತರಿಗೆ ಮೀಸಲಿಟ್ಟ 11,144 ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದೆ 2024-25 ಸಾಲಿಗೆ ದಲಿತರಿಗೆ ಮೀಸಲಿಟ್ಟ 14,282 ಕೋಟಿಗೆ ಸರ್ಕಾರ ಕನ್ನಹಾಕಿದೆ ದಲಿತರ ಮೀಸಲು ನಿಧಿಗೆ ಕನ್ನಾ ಹಾಕಿದ ಸರ್ಕಾರದ ನಡೆ ಖಂಡನೀಯ ಎಂದು ಪ್ರತಿಭಟನಾ ನಿರತರು ಒಕ್ಕೊರಲಿನಿಂದ ವಿರೋಧಿಸಿದರು

ಪ್ರತಿಭಟನೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ,ಶಾಸಕ ಸಿದ್ದು ಸವದಿ,ಎಂ ಎಲ್ ಸಿ ಪೂಜಾರ ಹಾಗೂ ಅನೇಕ ಮುಖಂಡರು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button