ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ದಲಿತರಿಗೆ ಮೋಸ: ಸರ್ಕಾರದ ವಿರುದ್ಧ ಸಂಸದ ರಮೇಶ ಜಗಜಿಣಗಿ ವಾಗ್ದಾಳಿ.

ವಿಜಯಪುರ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಎಸ್ಸಿ ಎಸ್ಸಿ ಹಣ ಬಳಕೆ ಮಾಡಿಕೊಂಡಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಎಸ್ ಇ ಪಿ ಹಾಗೂ ಟಿ ಎಸ್ ಪಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಹಿನ್ನಲೆಯಲ್ಲಿ ವಿಜಯಪುರ ನಗರದಲ್ಲಿಂದು ಮಾತನಾಡಿ ನಮ್ಮ ಪಕ್ಷದ ನಿರ್ದೇಶನದಂತೆ ಹೋರಾಟ ಮಾಡುತಿದ್ದೇವೆ, ಹದಿನಾಲ್ಕು ಸಮಿತಿ ಮಾಡಿ ರಾಜ್ಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತರಿಗೆ ಮೋಸ ಮಾಡಿದೆ. ದಲಿತ ಸಮಾಜದ ಹಣ ಮಾತ್ರ ಮುಟ್ಟಿದ್ದೀರಿ.
ಅಲ್ಪಸಂಖ್ಯಾತರ ಮೀಸಲು ಹಣ ಯಾಕೆ ಮುಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು.. ಸಿಎಂಗೆ ದಲಿತರ ಮೇಲೆ ಅಭಿಮಾನ ಇದ್ದರೆ 29000 ಕೋಟಿ ಹಣ ಪಡೆದಿದ್ದನ್ನು ಸರಿ ಪಡಿಸಬೇಕು, ಇಲ್ಲವಾದರೆ ಹೋರಾಟ ಮಾಡುತ್ತೇವೆ ಎಂದರು. ದಲಿತ ಸಮಾಜದ ಪರಮೇಶ್ವರ ಮುನಿಯಪ್ಪ ಪ್ರಿಯಾಂಕ್ ಖರ್ಗೆ ಯಾಕೆ ಸುಮ್ಮನಿದ್ದೀರಿ ಎಂದು ವಾಗ್ದಾಳಿ ನಡೆಸಿ ನಿಮಗೆ ದಲಿತರ ಉದ್ದಾರ ಬೇಕಿಲ್ಲವೇ? ಎಂದು ಪ್ರಶ್ನಿಸಿದರು. ಗಂಗಾ ಕಲ್ಯಾಣ ಯೋಜನೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ದಲಿತರಿಗೆ ಭೂಮಿ ಖರೀಧಿ ಮಾಡಲು ಯೋಜನೆ ಮಾಡಿದ್ದೇ ನಾನು ಎಂದು ತಿಳಿಸಿದರು.
ಹಿಂದುಳಿದ ನಾಯಕ ಎಂದು ಮೋಸ ಮಾಡುತ್ತೀರಾ ದಲಿತ ನಾಯಕ ಹಾಗೂ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರಿಗೆ ಬುದ್ದಿ ಹೇಳುತ್ತಿಲ್ಲಾ, ಕೇರಳದ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಮಲ್ಲಿಕಾರ್ಜುನ ಖರ್ಗೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.ದಲಿತರ ಹಣ ವಿಚಾರ ಸರಿ ಮಾಡಬೇಕು, ಇಲ್ಲವಾದರೆ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.