ಮಹಿಳೆಯರು ಶಾರೀರಿಕವಾಗಿ ಮತ್ತು ಮಾನಸೀಕವಾಗಿ ಸದೃಢವಾಗಿದ್ದ ಮನೆ ಸ್ವರ್ಗಕ್ಕೆ ಸಮ; ಡಾ. ಶಾಂತಾ ರೇವಣ್ಣವರ

.ಬೆಳಗಾವಿ: ಇಂದು ನಗರಸೇವಕಿ ಖುರ್ಷಿದ್ ಮುಲ್ಲಾ ಅವರ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಜಯಲಕ್ಷ್ಮೀ ನಾಯ್ಕರ್ ಮತ್ತು ಸೌದಾಮಿನಿ ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ಸುನೀತಾ ಹಣಮಣ್ಣನವರ, ಜಯಶ್ರೀ ಮಾಳಗಿ, ಸಿಡಿಪಿಓ ರಾಮಮೂರ್ತಿ ಡಾ. ಶಾಂತಾ ರೇವಣ್ಣನವರ, ರಂಜನಾ ಬಾಬಶೇಠ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
ಈ ವೇಳೆ ಮಾತನಾಡಿದ ಡಾ. ಶಾಂತಾ ರೇವಣ್ಣನವರ,ಹೆಣ್ಣು ಹುಟ್ಟಿದಾಗಿನಿಂದಲೇ ಶೋಷಣೆಗಳನ್ನು ಸಹಿಸುತ್ತಾ ಮುಂದೆ ಸಾಗುತ್ತಾಳೆ. ಆದರೇ ಈಗ ಕಾಲ ಬದಲಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಸೈಕಲ್ ಚಲಾಯಿಸುವುದರೊಂದಿಗೆ ವಿಮಾನ ಹಾರಿಸುವ ಹಂತಕ್ಕೆ ಮಹಿಳೆ ಮುಂದುವರೆದಿದ್ದಾಳೆ. ಮಹಿಳೆಯರು ಸದೃಢವಾಗಿ, ಆರೋಗ್ಯವಂತರಾಗಿರಬೇಕು. ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳಬೇಕು. ಮಹಿಳೆಯರು ಶಾರೀರಿಕವಾಗಿ ಮತ್ತು ಮಾನಸೀಕವಾಗಿ ಸದೃಢವಾಗಿದ್ದ ಮನೆ ಸ್ವರ್ಗಕ್ಕೆ ಸಮ ಎಂದರು.
ಇನ್ನು ಸಿಡಿಪಿಓ ರಾಮಮೂರ್ತಿ ಅವರು, ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಆನಲೈನ್ ಮೋಸಗಾರರ ಜಾಲದಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ. ವಂಚಕರು ಫೋನ್ ಮೂಲಕ ಕರೆ ಮಾಡಿ ಮೋಸಗೊಳಿಸುತ್ತಾರೆ. ಇಂತಹವೆಲ್ಲವೂದರ ಬಗ್ಗೆ ಜಾಗೃತರಾಗಿರಬೇಕು. ಮಾನಸೀಕ ಹಿಂಸೆಗೊಳಗಾಗದೇ ಪೊಲೀಸರ ಸಹಾಯವನ್ನು ಪಡೆಯಬೇಕೆಂದರು.
ಈ ವೇಳೆ ಅನುರಾಧಾ ದೇಸಾಯಿ, ನದೀಮ್ ಮುಲ್ಲಾ, ಪರಶುರಾಮ್ ಪುಜಾರಿ, ಸುವರ್ಣಾ ಪಾಟೀಲ್, ಶಾಂತಾ ಮುತಕೇಕರ, ಸುರೇಖಾ ಕೋರೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.