Uncategorized
ಬೆಳಗಾವಿಯಲ್ಲಿ ಮಹಿಳಾ ದಿನಾಚರಣೆ ಉಚಿತ ನಿಯಮಿತ ಯೋಗ ಕಕ್ಷದಲ್ಲಿ ಕಾರ್ಯಕ್ರಮ.

ಬೆಳಗಾವಿ: ಉಚಿತ ನಿಯಮಿತ ಯೋಗ ಕಕ್ಷದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿ, ಉಚಿತ ನಿಯಮಿತ ಯೋಗ ಕಕ್ಷದಲ್ಲಿ ಪ್ರಧಾನ ಯೋಗ ಗುರುಗಳಾದ ಅರುಣ್ ಪುಣೆಕರ್ ಗುರುಗಳ ನೇತೃತ್ವದಲ್ಲಿ ಮಹಿಳಾ ಯೋಗ ಶಿಕ್ಷಕರು ಮತ್ತು ಸಾಧಕರ ಗಳನ್ನು ಕಕ್ಷದ ವತಿಯಿಂದ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಸತ್ಕರಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ಹಾಗೂ ಮಹಿಳೆಯರ ಕುರಿತು ವಯಸ್ಕರ ಶಿಕ್ಷಣಾಧಿಕಾರಿಗಳಾದ ಎ ಎಂ ಜಯಶ್ರೀ, ಮತ್ತು ಸುರೇಶ್ ಎಂ ಕಲ್ಯಾಣ್ ಶೆಟ್ಟಿ ಮಾತನಾಡಿದರು.ಕಾರ್ಯಕ್ರಮದ ನಂತರ ಅರುಣ ಪುಣೆಕರ್ ದಂಪತಿಗಳಿಂದ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.