ಕನ್ನಡ ಸಂಘಟನೆಗಳ ಒಕ್ಕೂಟದಿಂದ ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ.

ಬೆಳಗಾವಿ : ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎಂಇಎಸ್ ಪುಂಡಾಟಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ ನಾಗರಾಜ್ ಸಾರಾ ಗೋವಿಂದ ಎಲ್ಲ ಕನ್ನಡಪರ ಸಂಘಟನೆಗಳ ಅಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.
ಬೆಳಗಾವಿಯಲ್ಲಿ ಒಂದಿಲ್ಲೊಂದು ಖ್ಯಾತಿ ತೆಗೆಯುತ್ತಿರುವ ಎಂಇಎಸ್, ಶೀವ ಸೇನೆಯನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು, ರಾಜ್ಯೋತ್ಸವ ಸಮಯದಲ್ಲಿ ಮರಾಠಿಗರಿಗೆ ನೀಡುವ ಕರಾಳ ದಿನಾಚರಣೆ ಅನುಮತಿ ನೀಡಬಾರದು ಹಾಗೂ ಕೂಡಲೆ ಕಳಸಾ ಬಂಡೂರಿ, ಮೇಕೆ ದಾಟು ಯೋಜನೆಗಳನ್ನು ಕೂಡಲೆ ಚಾಲನೆ ನೀಡಬೇಕು ಬಸ್ಸ ನಿರ್ವಾಹಕನ ಮೇಲೆ ಸುಳ್ಳು ಫೋಕ್ಸೋ ದಾಖಲಿಸಿದ ಪೋಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು, ಮರಾಠಿಯಲ್ಲಿ ದಾಖಲೆಗಳನ್ನು ನೀಡುವುದಾಗಿ ಹೇಳಿಕೆ ನೀಡಿದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಬಿಸಿ ಮುಟ್ಟುವಂತೆ ಮಾಡಬೇಕು ಬಜೆಟ್ ಅಧಿವೇಶನದಲ್ಲಿ ಎಂಇಎಸ್ ನಿಷೇಧ ಕಾಯ್ದೆ ಜಾರಿ ಮಾಡಬೇಕಿತ್ತು, ಎಂಇಎಸ್ ಸಂಘಟನೆಯ ನಿಷೇಧ ಮಾಡದಿದ್ದರೆ ಬೆಳಗಾವಿಯಲ್ಲಿ ಶಾಸಕ ಸಭೆ ನಡೆಸಲು ಬಿಡುವುದಿಲ್ಲ, ಬೆಳಗಾವಿಗಾಗಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಮಾಡಲಾಗುವುದು, ಬೆಳಗಾವಿ ಅಧಿಕಾರಿಗಳು ರಾಜಕಾರಣಿಗಳು ತಮ್ಮನ್ನು ಮಾರಿಕೊಂಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡಪರ ಒಕ್ಕೂಟದ ಸಂಘಟನೆಗಳಾದ ಶಿವರಾಮೇಗೌಡ ಕರವೇ, ಮಂಜುನಾಥ ದೇವ ಅವರ ಕನ್ನಡ ಜಾಗೃತಿ ವೇದಿಕೆ, ಕೆ.ಆರ.ಕುಮಾರ ಕನ್ನಡ ಸೇನೆ, ರೂಪೇಶ್ ರಾಜಣ್ಣ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಅಧ್ಯಕ್ಷರುಗಳು ಕಾರ್ಯಕರ್ತರು ಭಾಗಿಯಾಗಿದ್ದರು.