ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘದ ಹುದ್ದೆಗಳ ಬದಲಾವಣೆ

ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವ ಪ್ರಭು ವಂಟಮುರಿ ಇವರ ಆದೇಶದ ಮೇರೆಗೆ ಎಂದು ಹುಕ್ಕೇರಿಯ ಶ್ರೀ ಸಿದ್ಧಾರೂಢ ಮಠದ ಆಶ್ರಮದಲ್ಲಿ ಇಂದು ಸಂಘದ ನಿಯಮದ ಪ್ರಕಾರ ಹುದ್ದೆಗಳ ಬದಲಾವಣೆಗಳನ್ನು ಹಾಗೂ ಸಂಘದ ಹಿತ ದೃಷ್ಟಿಯಿಂದ ಕೆಲವು ಹುದ್ದೆಗಳನ್ನು ಬದಲಾವಣೆ ಮಾಡಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ್ ಮರಬಸನ್ನವರ ಹಾಗೂ ರಾಜ್ಯ ಉಪಾಧ್ಯಕ್ಷರಾದ ಜಿಯಾವುಲ್ಲಾ ವಂಟಮುರಿ ಇವರ ನೇತೃತ್ವದಲ್ಲಿ
ಹುಕ್ಕೇರಿ ತಾಲೂಕಾ ಅಧ್ಯಕ್ಷರಾಗಿ ಶಶಿಶೇಖರ್ ವಿ ದಾಮನೆಮಠ
ಸಂಘ ಸರ್ವ ಸದಸ್ಯರ ಸರ್ವಾನುಮತದಿಂದ ಈ ಆಯ್ಕೆ ಪ್ರತಿಕ್ರಿಯೆ ನಡೆಯಿತು
ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲ್ ಮರಬಸನ್ನವ ಸಂಘಟನೆಯು ಇನ್ನೂ ಬಲಿಷ್ಠವಾಗಿ ಬೆಳೆಯಬೇಕಾಗಿದೆ ಸಂಘದ ಹಿತ ದೃಷ್ಟಿಯಿಂದ ಹುಕ್ಕೇರಿ ತಾಲೂಕ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡಲಾಗಿದೆ ನಂತರ ಮಾತಾಡಿದ ರಾಜ್ಯ ಉಪಾಧ್ಯಕ್ಷರಾದ ಜಯಾವುಲ್ಲ ವಂಟಮುರಿ ಸಂಘದಲ್ಲಿ ಅಡಕು ತೋಡಕುಗಳನ್ನು ನಿವಾರಣೆಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸ್ವಾರ್ಥಕ್ಕಾಗಿ ಸಂಘಟನೆ ಬೇಡ ಸಮಾಜದ ಒಳಿತಿಗಾಗಿ ಸಂಘಟನೆ ಬೇಕು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿ ನಮ್ಮ ಹೆಜ್ಜೆಯನ್ನು ಮುಂದಿಡಬೇಕಾಗಿದೆ ಎಂದು ತಾಲೂಕ ಗೌರವಾಧ್ಯಕ್ಷರಾದ ಡಾ. ರವಿ ಬಿ ಕಾಂಬಳೆ ಸರ್ವ ಸದಸ್ಯರಿಗೆ ಕಿವಿ ಮಾತು ಹೇಳಿದರು