Uncategorized
ಚನ್ನರಾಜ ಹಟ್ಟಿಹೊಳಿ ಅವರ ಶಾಸಕರ ನಿಧಿಯಿಂದ ಗ್ರಾಮದಲ್ಲಿ ಹೈಮಾಸ್ಕ್ ದೀಪ.

ಖಾನಾಪುರ : ಗ್ರಾಮದಲ್ಲಿನ ಶ್ರೀ ಚವಾಟೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಹಾಗೂ ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೈಮಾಸ್ಕ್ ದೀಪ ಅಳವಡಿಸಲಾಗಿದ್ದು. ಚನ್ನರಾಜ ಹಟ್ಟಿಹೊಳಿ ಅವರ ಅನುಪಸ್ಥಿತಿಯಲ್ಲಿ ಗ್ರಾಮಸ್ಥರು ಹಾಗೂ ಆಪ್ತ ಸಹಾಯಕರು ಹೈಮಾಸ್ಕ್ ದೀಪ ಉದ್ಘಾಟಿಸಿದರು.
ತಾಲೂಕಿನ ಲಕ್ಕೇಬೈಲ್ ಗ್ರಾಮಸ್ಥರ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಬೇಡಿಕೆಯ ಮೇರೆಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಶಾಸಕರ ನಿಧಿಯಿಂದ ಗ್ರಾಮದಲ್ಲಿ ಹೈಮಾಸ್ಕ್ ದೀಪ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಮಹಾದೇವ ಕೋಳಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅರ್ಜುನ ಸನದಿ, ಸದಸ್ಯರಾದ ಚಂದ್ರು ಚಲವಾದಿ, ಪರಶು ಗುರವ, ಗೌಡಾ ಪಾಟೀಲ, ನಿಂಗಪ್ಪ ಪಾಟೀಲ, ಆಪ್ತ ಸಹಾಯಕ ವಿನೋದ್ ಪಾಟೀಲ, ಜಾತ್ರಾ ಸಮಿತಿಯ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು