ಬೆಳಗಾವಿ

ಕುಡಿದ ನಶೆಯಲ್ಲಿ ತಂಟೆ ತೆಗೆದಿದ್ದ ಯುವಕನ ಕಣ್ಣಿಗೆ ಕಾರದಪುಡಿ ಹಾಕಿ ಹಲ್ಲೆ.

ಬೆಳಗಾವಿ: ಕುಡಿದ ನಶೆಯಲ್ಲಿ ಯುವಕನೊಬ್ಬ ತಾಯಿಯೊಂದಿಗೆ ಜಗಳ ಮಾಡುವುದರ ಜೊತೆಗೆ ಭಜನೆ ಮಾಡುತ್ತಿದ್ದ ಓಣಿಯ ಜನರ ಜೊತೆಗೂ ತಂಟೆ ತೆಗೆದಿದ್ದರಿಂದ ಸ್ಥಳೀಯರು ಅವನ ಕಣ್ಣಿಗೆ ಕಾರದಪುಡಿ ಹಾಕಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ನಡೆದಿದೆ

ಅವನು ಪ್ರತಿನಿತ್ಯ ಕುಡಿದು ಬಂದು ಮನೆಮಂದಿಯೊಂದಿಗೆ ರಂಪಾಟ ಮಾಡುತ್ತಿದ್ದ ಬುಧವಾರ ರಾತ್ರಿ ಕುಡಿದು ಬಂದು ತಾಯಿಯೊಂದಿಗೆ ಜಗಳ ಮಾಡಿದ್ದ ತಾಯಿ ಬೈದಿದ್ದಕ್ಕೆ ಓಣಿಗೆ ಹೋಗಿ ಅಲ್ಲಿ ಭಜನೆಗೆ ಮಾಡುತ್ತಿದ್ದವರಿಗೆ ಅಡ್ಡಿಪಡಿಸಿದ್ದರಿಂದ ಯುವಕನ ವರ್ತನೆಗೆ ಬೇಸತ್ತು ಓಣಿಯ ಜನರು ಕಣ್ಣಿಗೆ ಕಾರದ ಪುಡಿ ಎರಚಿ ಥಳಿಸಿದ್ದಾರೆ.
ಉದಯ ಮಹಾದೇವ ಕಾತೇದಾರ್ ಹಲ್ಲೆಗೆ ಒಳಗಾದ ಯುವಕನಾಗಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಉದಯ ಕಾತೇದಾರಗೆ ಬೆಳಗಾವಿ ಬೀಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತು ಉದಯನ ತಾಯಿ ಸೇವಂತಾ ಇನ್ ನ್ಯೂಸ್ಗೆ ಮಾಹಿತಿ ನೀಡಿದರು.

ಓಣಿಯವರೆಲ್ಲ ಒಂದಾಗಿ ನಮ್ಮ ಚಿಕ್ಕಮ್ಮನ ಮನೆಯನ್ನು ಒಂದೇ ಮಾಡಿ ಉದ್ದೇಶಪೂರ್ವಕವಾಗಿ ನಮ್ಮ ತಮ್ಮನನ್ನು ಥಳಿಸಿದ್ದಾರೆ ಯಾರು ಬಿಡಿಸಲು ಸಹ ಮುಂದಾಗಿಲ್ಲ ಈ ಕುರಿತು ನಾನು ದೂರು ದಾಖಲಿಸಿದ್ದೇನೆ ಎಂದು ಹಲ್ಲಿಗೊಳಗಾದ ಉದಯನ ದೊಡ್ಡಮ್ಮನ ಮಗ ಹುಕ್ಕೇರಿಯ ದಲಿತ ಕಾರ್ಯಕರ್ತ ಸುರೇಶ್ ರಾಮಪ್ಪ ಚಿನ್ನಿಕೊಪ್ಪ ಮಾಧ್ಯಮದ ಮುಂದೆ ಹೇಳಿದರು

Related Articles

Leave a Reply

Your email address will not be published. Required fields are marked *

Back to top button