Uncategorized
ರಸಮಂಜರಿ ನೋಡಲು ಹೋಗುತ್ತಿದ್ದಂತೆ 6 ಮನೆಗಳ ಬೀಗ ಒಡೆದ ಕಳ್ಳರು…

ರಸಮಂಜರಿ ನೋಡಲು ಹೋಗುತ್ತಿದ್ದಂತೆ 6 ಮನೆಗಳ ಬೀಗ ಒಡೆದ ಕಳ್ಳರು…
ಇಳಕಲ್’ನಲ್ಲಿ ಸರಣಿಗಳ್ಳತನ; ಚಿನ್ನಾಭರಣ ದೋಚಿ ಪರಾರಿ
ರಸಮಂಜರಿ ಕಾರ್ಯಕ್ರಮ ನೋಡಲು ಹೋದ ಜನರ ಮನೆಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು 6 ಮನೆಗಳಲ್ಲಿ ಸರಣಿಗಳ್ಳತನ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ಲ್ ನಲ್ಲಿ ಮತ್ತೆ ಕಳ್ಳರ ಗ್ಯಾಂಗ್ ಆಕ್ಟಿವ್ ಆಗಿದೆ. ಬೀಗ ಹಾಕಿದ ಮನೆಗಳಲ್ಲೇ ಟಾರ್ಗೆಟ್ ಮಾಡಿದ ಖದೀಮರು ಆರು ಮನೆಗಳಲ್ಲಿ ಸರಣಿಗಳ್ಳತನ ಮಾಡಿದ್ದಾರೆ.
ನಿನ್ನೆ ನಗರದ ಜೆಸಿ ಶಾಲೆ ಬಳಿಯ ಶರಣ ಬಸವೇಶ್ವರ ಜಾತ್ರೆಯ ನಿಮಿತ್ಯ ತಡರಾತ್ರಿ ರಸಮಂಜರಿ ಕಾರ್ಯಕ್ರಮ ನಡೆದಿತ್ತು, ಜನರು ಮನೆಗೆ ಬೀಗ ಹಾಕಿ ರಸಮಂಜರಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ರಾತ್ರಿ 12 -1 ಗಂಟೆಯೊಳಗೆ 6 ಮನೆಗಳ ಬೀಗ ಒಡೆದಿದ್ದಾರೆ. ಅಲ್ಲದೇ ಮೂರು ಮನೆಗಳಲ್ಲಿನ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದು, ಇನ್ನುಳಿದ 3 ಮನೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಏನೂ ಸಿಕ್ಕಿಲ್ಲ.
ಸುಮಾರು 100 ಗ್ರಾಂ ಬಂಗಾರ, 200 ಗ್ರಾಂ ಬೆಳ್ಳಿ ಸೇರಿದಂತೆ ನಗದು ಹಣ ಕಳ್ಳತನ ಮಾಡಲಾಗಿದೆ. ಕಳ್ಳತನ ನಡೆದ ಸ್ಥಳಕ್ಕೆ ಡಾಗ್ ಸ್ಕ್ವಾಡ್, ಫಿಂಗರ್ ಪ್ರಿಂಟ್ ಎಕ್ಸ್ ಪರ್ಟ್ಸ್ಗಳ ಆಗಮಿಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ, ಹುನಗುಂದ ಸಿಪಿಐ ಸನಿಲ್ ಸವದಿ ನೇತೃತ್ವದಲ್ಲಿ ಖದೀಮರಿಗಾಗಿ ಹುಡುಕಾಟ ನಡೆದಿದೆ.