ನಿಯಮ ಉಲ್ಲಂಘನೆ ಮಾಡುವವರಿಗೆ ಇದೊಂದು ಪಾಠ: ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲ..

ಬಸನಗೌಡ ಯತ್ನಾಳ ಪಾಟೀಲ ಅವರಿಗೆ ಈ ಹಿಂದೆಯೇ ಪಕ್ಷ ಸಾಕಷ್ಟು ಬಾರಿಗೆ ಸೂಚನೆ ನೀಡಿದ್ದರೂ ಅವರ ನಡವಳಿಕೆ ಮಾತ್ರ ಬದಲಾಗಿಲ್ಲ. ಬಿಜೆಪಿಗೆ ಶಿಸ್ತು ಮುಖ್ಯವಾಗಿದ್ದು, ವ್ಯಕ್ತಿಯಲ್ಲಿ ಎಂದು ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ಯತ್ನಾಳ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯತ್ನಾಳ ಅವರಿಗೆ ಎರಡು ಮೂರು ಬಾರಿ ನೋಟಿಸ್ ಕೊಟ್ಟಿದ್ದು, ವರಿಷ್ಠರು ಕರೆಯಿಸಿ ಮಾತನಾಡಿದ್ದರೂ ಕೂಡ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ನಿರ್ಧಾರ ತೆಗೆದುಕೊಂಡಿದ್ದಾರೆ. ಪಕ್ಷದ ಗೊಂದಲಕ್ಕೆ ನಾಯಕರು ಇತಶ್ರೀ ಹಾಡುತ್ತಾರೆ ಅಂತ ಮೊನ್ನೆಯೇ ಹೇಳಿದ್ದೆ. ಈಗ ಪಕ್ಷ ನಿರ್ಧಾರ ತೆಗೆದುಕೊಂಡಿದೆ ಎಂದರು.
ಇದು ಪಕ್ಷದ ನಿರ್ಧಾರ ಮಾತ್ರವಲ್ಲದೇ ನಿಯಮ ಉಲ್ಲಂಘನೆ ಮಾಡುವವರಿಗೆ ಇದೊಂದು ಪಾಠ. ಪಕ್ಷದ ಶಿಸ್ತನ್ನು ಯಾರೇ ಉಲ್ಲಂಘನೆ ಮಾಡಿದರೂ ವರಿಷ್ಠರು ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.