Uncategorized

ಶಾಸಕ ಯತ್ನಾಳ ಉಚ್ಚಾಟನೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ:ಹಲವೆಡೆ ಪ್ರತಿಭಟನೆಗಳು, ಯತ್ನಾಳ ಅಭಿಮಾನಿಗಳಿಂದ ರಾಜೀನಾಮೆ

ಶಾಸಕ ಯತ್ನಾಳ ಉಚ್ಚಾಟನೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ:ಹಲವೆಡೆ ಪ್ರತಿಭಟನೆಗಳು, ಯತ್ನಾಳ ಅಭಿಮಾನಿಗಳಿಂದ ರಾಜೀನಾಮೆ

ವಿಜಯಪುರ ನಗರ‌ ಶಾಸಕ ಬಸನಗೌಡ ‌ಪಾಟೀಲ ಯತ್ನಾಳಗೆ ಬಿಜೆಪಿಯಿಂದ ಉಚ್ಚಾಟನೆ ಬೆನ್ನಲ್ಲೇ ಜಿಲ್ಲೆಯಲ್ಲಿ ಯತ್ನಾಳ ಬೆಂಬಲಿಗರ ರಾಜೀನಾಮೆ ಪರ್ವ ಮುಂದುವರೆದರೆ, ಜಿಲ್ಲೆಯ ಕೆಲ ಭಾಗದಲ್ಲಿ ಪ್ರತಿಭಟನೆ ಕೂಡಾ ನಡೆಯುತ್ತಿವೆ. ಇತ್ತ ಜಿಲ್ಲಾ ಕೋರ್ ಕಮಿಟಿಯಲ್ಲಿ ಸಹಿತ ಯತ್ನಾಳ ‌ ಉಚ್ಚಾಟನೆ ಅಂಗೀಕಾರ ಮಾಡಿದ್ಧಾರೆ. ಈ ಕುರಿತಾದ ‌ಒಂದು ಕಂಪ್ಲೀಟ್ ವರದಿ‌ ಇಲ್ಲಿದೆ ನೋಡಿ…

ಹೌದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ ಹಿನ್ನಲೆ ವಿಜಯಪುರ ಜಿಲ್ಲೆಯಲ್ಲಿ ‌ಯತ್ನಾಳ ಅಭಿಮಾನಿಗಳು ಭುಗಿಲೆದ್ದಿದ್ದಾರೆ. ಯತ್ನಾಳ್ ಉಚ್ಚಾಟನೆ ‌ವಿರೋಧಿಸಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಶಾಸಕ ಯತ್ನಾಳ ಅಭಿಮಾನಿಗಳು ವಿಜಯೇಂದ್ರ, ಯಡಿಯೂರಪ್ಪ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ರಸ್ತೆ ಮೇಲೆ ಭಾವಚಿತ್ರಗಳನ್ನ ಇಟ್ಟು ತುಳಿದು ಆಕ್ರೋಶ ಹೊರ ಹಾಕಿದರು. ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಯತ್ನಾಳ್ ಬೆಂಬಲಿಗರು ಹಾಗೂ ಪಂಚಮಸಾಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವಿಜಯಪುರ ನಗರದ ಶಾಸಕ ಯತ್ನಾಳ ಅವರ ಕಚೇರಿ ಮುಭಾಗ ಯತ್ನಾಳ ಅವರ ಉಚ್ಚಾಟನೆ ಹಿನ್ನಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಹೊರ ಬರಲು ಅಭಿಮಾನಿಗಳು ಅಭಿಯಾನ ಶುರು ಮಾಡಿದ್ದಾರೆ. ನಮೋ ಆಫ್ ಮೂಲಕ ಪ್ರಾಥಮಿಕ ಸದಸ್ಯತ್ವದಿಂದ ಹೊರ ಬರಲು ಅಭಿಯಾನವನ್ನೆ ಮಾಡುತ್ತಿದ್ದಾರೆ. ವಿಜಯಪುರ ನಗರದ ಶಾಸಕ ಯತ್ನಾಳ ಅವರ ಕಚೇರಿ ಮುಂಭಾಗ ತಮ್ಮ ತಮ್ಮ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಿಕೊಂಡರು.
ಈಗಾಗಲೇ ಜಿಲ್ಲೆಯಲ್ಲಿ ನೂರಾರು ಸದಸ್ಯರಿಂದ ಈಗಾಗಲೇ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಕೈಯ್ಯಲ್ಲಿ ರಾಜೀನಾಮೆ ಪತ್ರ ಹಿಡಿದು ಬಿಜೆಪಿ ಕಚೇರಿ ಬಂದು ಮೋರ್ಚಾ, ನಗರ ಮಂಡಲ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸ್ಥಾನಗಳಿಗೆ ರಾಜೀನಾಮೆ ಪತ್ರಗಳನ್ನ ಜಿಲ್ಲಾಧ್ಯಕ್ಷರಿಗೆ ನೀಡಿದರು. ಜಿಲ್ಲಾಧ್ಯಕ್ಷರು ಮನವಲಿಕೆ ಯತ್ನ ಮಾಡಿದರು,

ರಾಜೀನಾಮೆ ಪಡೆಯಿರಿ ಎಂದು ಪದಾಧಿಕಾರಿಗಳ ಒತ್ತಾಯ ಪೂರ್ವಕವಾಗಿ ರಾಜೀನಾಮೆ ನೀಡಿದರು. ಇದೇ ವೇಳೆ ಮಹಿಳಾ ಪದಾಧಿಕಾರಿ ಲಕ್ಷ್ಮಿ ಕನ್ನೋಳ್ಳಿ ಕಣ್ಣೀರು ಹಾಕಿದರು. ಇದರ ಮದ್ಯೆ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರ ನೇತೃತ್ವದಲ್ಲಿ ಮಾದ್ಯಮಗೋಷ್ಠಿ ನಡೆಸಿ ಯತ್ನಾಳ್ ಉಚ್ಚಾಟನೆಯನ್ನು ಜಿಲ್ಲಾ ಬಿಜೆಪಿ ಕೋರ್ ಕಮೀಟಿಯಲ್ಲಿ ಸರ್ವಾನುಮತದಿಂದ ಅಂಗಿಕರಿಸಲಾಗಿದೆ ಎಂದು ಮಾಜಿ ಎಂ ಎಲ್ ಸಿ ಅರುಣ ಶಹಾಪುರ ಹೇಳಿದರು…

Related Articles

Leave a Reply

Your email address will not be published. Required fields are marked *

Back to top button