ಹುದ್ದೆ ಕೊಡಿಸುತ್ತೇನೆ ಅಂತ ನಂಬಿಸಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದವರ ಬಂಧನ.

ಕಲಬುರಗಿ: ಅಮಾಯಕ ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ ಸರ್ಕಾರದ ವಿವಿಧ ಇಲಾಖೆಯಲ್ಲಿನ ಡಿ ಗ್ರೂಪ್ ಹುದ್ದೆಯಿಂದ ಹಿಡಿದು ಗ್ರೇಡ್- 2 ತಹಶಿಲ್ದಾರ್ವರೆಗಿನ ಹುದ್ದೆ ಕೊಡಿಸುತ್ತೇನೆ ಅಂತ ನಂಬಿಸಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದವರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಮೇಳಕುಂದಾ ಗ್ರಾಮದ ನಿವಾಸಿ ನಾಗೇಶ್, ಬೆಳಗಾವಿ ಜಿಲ್ಲೆಯ ಅಭಿಷೇಕ ಬಂಧಿತ ಆರೋಪಿಗಳು.
ಆರೋಪಿಗಳು ಅಮಾಯಕ ನಿರುದ್ಯೋಗಿ ಯುವಕರನ್ನ ಗುರಿಯಾಗಿಸಿಕೊಂಡು ಅವರಿಗೆ ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರಿ ಕೊಡಿಸುತ್ತೇನೆ ಅಂತ ಆಮಿಷ ಒಡ್ಡಿ ಅವರಿಂದ ಲಕ್ಷಾಂತರ ರೂಪಾಯಿ ದುಡ್ಡು ವಸೂಲಿ ಮಾಡಿ ನಕಲಿ ನೇಮಕಾತಿ ಆದೇಶಗಳನ್ನ ಕೊಟ್ಟು ಕಳುಹಿಸ್ತಿದ್ದರು. ಈ ನೇಮಕಾತಿ ಆದೇಶ ತೆಗೆದುಕೊಂಡು ಆಯಾ ಇಲಾಖೆಗೆ ಹೋಗಿ ಕೆಲಸಕ್ಕೆ ಸೇರಲು ಮುಂದಾದಾಗ ಇದು ಅಸಲಿಯಲ್ಲ ನಕಲಿ ಅಂತ ಯುವಕರಿಗೆ ಗೋತ್ತಾಗಿದೆ.
ಬಳಿಕ, ಯುವಕ ನೌಕರಿ ಕೊಡಿಸುತ್ತೇನೆ ಅಂತ ದುಡ್ಡು ತೆಗೆದುಕೊಂಡ ಆರೋಪಿಗಳ ಬಳಿ ಹೊದರೇ, ದುಡ್ಡು ವಾಪಸ್ ಕೊಡದೆ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. “ಇದರಲ್ಲಿ ನೀನು ಜೈಲಿಗೆ ಹೋಗುತ್ತೀಯಾ” ಅಂತ ಹೆದರಿಸಿ ಕೇಳುಹಿಸಿದ್ದಾರೆ. ಹೀಗೆ, ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದ ನಾಗೇಶ್ ಮತ್ತು ಅಭಿಷೇಕ್ ಇಬ್ಬರನ್ನು ಕಲಬುರಗಿ ಜಿಲ್ಲಾ ಸೆನ್ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.