ಹುಬ್ಬಳ್ಳಿ

ವ್ಯಾಪಾರದಲ್ಲಿನ ಸಮಸ್ಯೆ ಪರಿಹರಿಸುವುದಾಗಿ ನಂಬಿಸಿ 29.60 ಲಕ್ಷ ವಂಚನೆ.

ಹುಬ್ಬಳ್ಳಿ:ವ್ಯಾಪಾರದಲ್ಲಿ ಎದುರಾಗಿದ್ದ ಸಮಸ್ಯೆ ಪರಿಹರಿಸುವುದಾಗಿ ನಂಬಿಸಿ  ನಗರದ ವ್ಯಕ್ತಿಯೊಬ್ಬರಿಂದ 29.60 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ನಬಿಸಾಬ್ ನದಾಫ್ ವಂಚನೆಗೊಳಗಾದವರು.

ಪ್ರಕರಣ- 1: ನಬಿಸಾಬ್ ಅವರು ಫೇಸ್‌ಬುಕ್‌ನಲ್ಲಿ ಬ್ಲಾಕ್ ಟ್ರೇಡಿಂಗ್ ಜಾಹೀರಾತು ವೀಕ್ಷಿಸಿ ಲಿಂಕ್​ ಕ್ಲಿಕ್​ ಮಾಡಿದ್ದಾರೆ. ಆಗ ಅವರ ವಾಟ್ಸ್ಆ್ಯಪ್​ ಸಂಖ್ಯೆಗೆ ಮಹಿಳೆಯೊಬ್ಬರು ಸಂದೇಶ ಕಳುಹಿಸಿ, ನಾನು ಸ್ಟಾಕ್ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನಿಮ್ಮ ವ್ಯಾಪಾರದ ಸಮಸ್ಯೆ ಪರಿಹರಿಸಲು ಸಹಾಯ ಮಾಡುವುದಾಗಿ ನಂಬಿಸಿದ್ದಾರೆ. ನಂತರ ಸ್ಟಾಕ್ ಇನ್ವೆಸ್ಟ್​ಮೆಂಟ್ ಗ್ರೂಪ್​ಗೆ ಸೇರಿಸಿ, ಲಿಂಕ್ ಕಳುಹಿಸಿ ಆ್ಯಪ್ ಡೌನ್​ಲೋಡ್​ ಮಾಡಿಸಿದ್ದಾರೆ. ಅದರ ಮೂಲಕ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ-2: ಧಾರವಾಡದ ಮಹಿಳೆಯೊಬ್ಬರಿಗೆ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದೆಂದು ನಂಬಿಸಿ 12.88 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಸಿಂಧು ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಜಾಹೀರಾತು ನೋಡಿ ಪೇಜ್ ಓಪನ್ ಮಾಡಿದ್ದಾರೆ. ಅಲ್ಲಿ ಅನುಷ್ಕಾ ಎಂಬವರೊಂದಿಗೆ ವಾಟ್ಸ್​ಆ್ಯಪ್​ ಚಾಟ್ ಮಾಡಿದಾಗ, ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ. ನಂತರ ವಂಚಿಸಿದ್ದಾರೆಂದು ಮಹಿಳೆ ದೂರು ಕೊಟ್ಟಿದ್ದಾರೆ. ಸಿಇಎನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button