ಬೆಳಗಾವಿ
ನರೇಗಾ ಕೂಲಿ ಕೆಲಸ ಹೆಚ್ಚಿಸುವಂತೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ.

ಬೆಳಗಾವಿ: ನರೇಗಾ ಕೂಲಿ ಕೆಲಸ ಹೆಚ್ಚಿಸುವಂತೆ ಆಗ್ರಹಿಸಿ ನರೇಗಾ ಕೂಲಿಕಾರ್ಮಿಕ ಮಹಿಳೆಯರಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಗಾವಿ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. 100ದಿನಗಳ ಕೆಲಸ ನಿಯಮಾನುಸಾರ ಭತ್ಯೆ ನೀಡಬೇಕು. ನರೇಗಾ ಕಾನೂನಿನಡಿ ಯಾವುದೇ ಸವಲತ್ತುಗಳನ್ನು ಸರ್ಕಾರ ಕೊಡ್ತಿಲ್ಲ. ಮಹಿಳೆಯರು ನರೇಗಾದಡಿ ಶೇಕಡಾ 60ರಷ್ಟು ಉದ್ಯೋಗ ಖಾತ್ರಿ ಇಲ್ಲದಂತಾಗಿದೆ. ಉದ್ಯೋಗ ಖಾತ್ರಿ, ನಿರುದ್ಯೋಗ ಭತ್ಯೆ ಕೊಡಬೇಕು. ನರೇಗಾ ಕಾರ್ಮಿಕರಿಗೆ 100ದಿನ ಕೆಲಸ ಕೊಡಬೇಕು. ಸರ್ಕಾರದ ಸೌಲಭ್ಯಗಳು ನರೇಗಾ ಕಾರ್ಮಿಕರಿಗೆ ಸಿಗುವಂತಾಗಬೇಕೆಂದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಅವರಿಗೆ ಮನವಿ ಸಲ್ಲಿಸಲಾಯಿತು.