ಹಾವೇರಿ

84 ವರ್ಷ ವಯಸ್ಸಿನ ವೃದ್ಧೆಯ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿ

ಹಾವೇರಿ: 84 ವರ್ಷ ವಯಸ್ಸಿನ ವೃದ್ಧೆಯ ಮೈಮೇಲಿನ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು 25 ವರ್ಷದ ಸಂತೋಷ ತುಳಜಪ್ಪ ಸಿಂಧೆ ಮತ್ತು 49 ವರ್ಷದ ದ್ಯಾಮಣ್ಣ ಪಾಂಡಪ್ಪ ನವರಸಣ್ಣನವರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಹಾವೇರಿ ಜಿಲ್ಲೆ ರಾಣೆಬೆನ್ನೂರ ಪಟ್ಟಣದವರು.

ಇದೇ 6 ರಂದು ರಾಣೆಬೆನ್ನೂರಿನ 84 ರ್ಷದ ಸುಧಾಬಾಯಿ ಕುಲಕರ್ಣಿ ಎಂಬುವರು ದೇವಸ್ಥಾನದಿಂದ ಮನೆಗೆ ಬರುವಾಗ ಕೊರಳಲ್ಲಿರುವ ಚಿನ್ನದ ಸರಳ್ಳತನ ಮಾಡಿದ್ದರು. ಧಾಬಾಯಿ ಮೈಮೇಲಿದ್ದ ಸುಮಾರು 20 ಗ್ರಾಂ ಬಂಗಾರದ ಸರವನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಸಂತೋಷ ಮತ್ತು ದ್ಯಾಮಣ್ಣ ಹಣದ ಅಡಚಣೆಗಾಗಿ ಸರ ಕಳ್ಳತನ ಮಾಡುವ ಯೋಜನೆ ರೂಪಿಸಿದ್ದರು. ಅದರಂತೆ 84 ವರ್ಷದ ವೃದ್ಧೆಯ ಮೈಮೇಲಿದ್ದ ಸರ ಕಳ್ಳತನ ಮಾಡಿದ್ದರು.

ಆರೋಪಿತರಿಂದ 20 ಗ್ರಾಮ ಅಂದಾಜು 1 ಲಕ್ಷದ 50 ಸಾವಿರ ರೂಪಾಯಿ ಬೆಲೆಬಾಳುವ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಸರಗಳ್ಳತನಕ್ಕೆ ಬಳಸಿದ್ದ ಆಟೋ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಸಂತೋಷ ವೃತ್ತಿಪರ ಕಳ್ಳನಾಗಿದ್ದು, ಈತನ ಮೇಲೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದಲ್ಲಿ ದಸ್ತಗೀರನಾಗಿ ಕಳೆದ ಒಂದು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಇಬ್ಬರು ಇದ್ದರೆ ದ್ಯಾಮಣ್ಣ ಸಂತೋಷನಿಗೆ ಆಟೋದಲ್ಲಿ ಕರೆದುಕೊಂಡು ಹೋಗುವ ಮೂಲಕ ಸಹಾಯ ಮಾಡಿದ್ದ.

ಆರೋಪಿಗಳ ವಿರುದ್ದ ರಾಣೆಬೆನ್ನೂರು ಶಹರ್ ಠಾಣೆಯಲ್ಲಿ ಅಪರಾಧ ಸಂಖ್ಯೆ 81/2025 ಕಲಂ 309(4) ಬಿ.ಎನ್.ಎಸ್ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆ ಮಾಡಿರುವ ತಂಡಕ್ಕೆ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button