ಕುಡಿಯುವ ನೀರಿಗೆ ಹಾಹಾಕಾರ: ಸಚಿವ ಎಂಬಿಪಿ, ಶಾಸಕ ವಿಠ್ಠಲ ಕಟಕದೊಂಡ ವಿರುದ್ಧ ಗ್ರಾಮಸ್ಥರ ಆಕ್ರೋಶ.

ಬೇಸಿಗೆ ಬಿಸಿಲಿನ ತಾಪದ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ನಡುವೆ ಮಡಸನಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಕೆರೆಗೆ ನೀರು ಹರಿಸುವಂತೆ ರೈತರು ಒತ್ತಾಯ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಕನ್ನೂರು ಹಾಗೂ ಮಡಸನಾಳ ಗ್ರಾಮದ ರೈತರು ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿದ್ದಾರೆ. ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುವಂತಾಗಿದ್ದು, ತಿಡಗುಂದಿ ಶಾಖಾ ಕಾಲುವೆ ಮೂಲಕ ಕೆರೆಗೆ ನೀರು ಹರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ನೀಡಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಹೌದು… ವಿಜಯಪುರ ಜಿಲ್ಲೆಯಲ್ಲೀದಿಗ ಬಿಸಿಲಿನ ತಾಪದಿಂದ ಜನ ಕಂಗೆಟ್ಟಿದ್ದಾರೆ. ಇಂತಹ ಬಿಸಿಲಿನ ತಾಪದ ನಡುವೆಯೇ ನೀರಿನ ಹಾಹಾಕಾರ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೇ ಕುಡಿಯೋದಕ್ಕೆ ನೀರು ಕೊಡಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರ ತಾಲೂಕಿನ ಮಡಸನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಜ್ವಲಂತ ಸಮಸ್ಯೆಯನ್ನು ನಿವಾರಿಸಬೇಕೆಂದು ಒತ್ತಾಯಿಸಿ ಮಡಸನಾಳ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರು ಇಂದಿನ ದಿನದಲ್ಲಿ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಇದ್ದಾವೆ. ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಂಡಿರುವುದಿಲ್ಲಾ, ಜಿಲ್ಲಾ ಉಸ್ತುವಾರಿ ಸಚಿವರ ತವರೂರಲ್ಲಿ ನೀರಿನ ಜ್ವಲಂತ ಸಮಸ್ಯೆ ಉಂಟಾಗಿರುವುದು ನಾಚಿಗೇಡಿತನವಾಗಿದೆ.
ಸಾಕಷ್ಟು ಭಾರಿ ನೀರಿನ ತೊಂದರೆ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಚಿವರಿಗೆ ವಿನಂತಿಸಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಕುಡಿಯೋದಕ್ಕೆ ನೀರು ಕೊಡಿ. ಇದು ನಮ್ಮ ದೌರ್ಬಾಗ್ಯವಾಗಿದೆ ಎಂದು ರೈತರು ತಮ್ಮ ಸಮಸ್ಯೆಯನ್ನು ಯಾರಿಗೂ ಹೇಳದ ಪರಿಸ್ಥಿತಿವುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
.: ಸಚಿವರಾದ ಎಂ.ಬಿ. ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ ಇವರು ಕಾಣೆಯಾಗಿದ್ದಾರೆ. ತಮ್ಮದೇ ಸರ್ಕಾರವಿದ್ದರೂ ನೀರಿನ ಭವಣೆ ನೀಗಿಸದ ಪ್ರಶಂಸೆ ಇವರಿಗಿದೆ. ಇಂತಹ ನಾಯಕರು ನಮಗೇಕೆ ಬೇಕು ಎಂದು ಆರೋಪಿಸಿದರು.
ಕನ್ನೂರದಿಂದ 2.5 ಕಿ.ಮೀ ದೂರದಲ್ಲಿರುವ ಮಡಸನಾಳ ಗ್ರಾಮಕ್ಕೆ ನಿರ್ಮಾಣವಾದ ಕೆರೆಗೆ ಪೈಪ್ ಲೈನ್ ಮುಖಾಂತರ ನೀರು ತುಂಬಿಸಿ ಶಾಸ್ವತ ನೀರಿನ ಸಮಸ್ಯೆ ಬಗೆ ಹರಿಸಬೇಕು. ತಕ್ಷಣ ಈ ಜ್ವಲಂತ ಸಮಸ್ಯೆಯನ್ನು ನಿವಾರಿಸಿ ಗ್ರಾಮಸ್ಥರಿಗೆ ನೀರಿನ ಅನುಕೂಲ ಮಾಡಿಕೊಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.