
ಅಥಣಿ – ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದೇಸಾರಟ್ಟಿ ಗ್ರಾಮ. ಅಪಘಾತದಲ್ಲಿ ಕಾರ್ ಚಾಲಕ ಸ್ಥಳದಲ್ಲೇ ಸಾವು ವಿಜಯಪುರ ಮೂಲದ ಯಾಸೀನ್ ಇನಾಮ್‌ದಾರ್ 47 ಮೃತ ದುರ್ದೈವಿ.
ಸಂಕೇಶ್ವರ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ. ಕಾರ್ ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ. ದೇಸಾರಟ್ಟಿ ಗ್ರಾಮದ ಬಳಿ ನಡೆದ ದುರ್ಘಟನೆ.
ವಿಜಯಪುರದಿಂದ ಅಥಣಿ ಕಡೆ ತೆರಳುವ ಸಂದರ್ಭದಲ್ಲಿ ನಡೆದ ಭೀಕರ ಅಪಘಾತ. ಭೀಕರ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರ್. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ, ಪರಿಶೀಲನೆ. ಐಗಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.